ಡೈಲಿ ವಾರ್ತೆ: 20/Mar/2024
ಬೈಲಹೊಂಗಲ: ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಪುನಶ್ಚೇತನ ತರಬೇತಿ ಕಾರ್ಯಾಗಾರ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಎಲ್ಲಾ 35ಗ್ರಾಮ ಪಂಚಾಯತ್ ಗ್ರಂಥಪಾಲಕರಿಗೆ ಬೈಲಹೊಂಗಲ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ದಿನಾಂಕ 19/03/2024 ರ ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಂಗಾಧರ ಕಂದಕೂರ ಅವರು ವಹಿಸಿದ್ದರು ಹಾಗೂ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಶ್ರೀ ರಘುಅವರು ಮತ್ತು ಕಚೇರಿಯ ಸಹಿಯಕರು ಉಪಸ್ಥಿತರಿದ್ದರು. ಶಿಕ್ಷಣ ಫೌಂಡೇಶನನ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶ್ರೀ ಶ್ರೀಶೈಲ ಅಥಣಿ, ಬೆಳಗಾವಿ ಜಿಲ್ಲಾ ಸಂಯೋಜಕರಾದ ಬಾಳಪ್ಪಾ ಮಡಿವಾಳರ ಬೈಲಹೊಂಗಲ ತಾಲೂಕು ಸಂಯೋಜಕರಾದ ಗೀತಾ ಗುಜನಾಳ, ಶ್ರೀ ಮಹದೇವ ಮಲಶೆಟ್ಟಿ,ವೀರಣ್ಣ ಗುಂಡಗಾಂವಿ,ಶ್ರೀದೇವಿ ಬೈಲವಾಡ ಮತ್ತು ತಾಲೂಕಿನ ಗ್ರಂಥಾಲಯ ಸಂಘದ ಅಧ್ಯಕ್ಷರಾದ ಸಿ.ಬಿ.ಕಳಸನ್ನವರ , ಉಪಾಧ್ಯಕ್ಷರಾದ ಕೆ.ಟಿ.ಹೂಗಾರ ಇನ್ನೂಳಿದ ಎಲ್ಲ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಶ್ರೀಶೈಲ ಅಥಣಿ ಶಿಕ್ಷಣ ಫೌಂಡೇಶನ್ ಹಿನ್ನೆಲೆ ಬೆಳೆದು ಬಂದ ಹಾದಿ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಪರಿಚಯ ಮಾಡಿಕೊಟ್ಟರು. ನಂತರ ಇ.ಓ ಸರ್ ಅವರು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ನೀಡಿದ ಡಿಜಿಟಲ್ ಡಿವೈಸ್ ಗಳನ್ನು ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು ಮತ್ತು ಈ ಶತಮಾನಕ್ಕೆ ಬೇಕಾದ ಡಿಜಿಟಲ್ ಕೌಶಲ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬೆಳಗಾವಿ ವಲಯ ಸಂಯೋಜಕರು ಶ್ರೀಶೈಲ ಅಥಣಿ ಸರ್ ಅವರು ಕಂಪ್ಯೂಟರ್ ಮೂಲ ವಿಷಯಗಳಾದ ಎಂ.ಎಸ್. ಆಫೀಸ್,ಇಮೇಲ್, ಪಿಡಿಎಫ್, ಕನ್ನಡ ಟೈಪಿಂಗ್ ಇನ್ನು ಹಲವಾರು ಡಿಜಿಟಲ್ ಸಾಕ್ಷರತೆಯ ಬಗ್ಗೆ ತಿಳಿಸಿಕೊಟ್ಟರು ಹಾಗೂ ಶಿಕ್ಷಣ ಪೀಡಿಯಾ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಿದರು . ಶಿಕ್ಷಣ ಪಿಡಿಯಾ ಅಪ್ಲಿಕೇಶನ್ ಅಕಾಡೆಮಿಕ್ಸ್, ಡಿಜಿಟಲ್ ಸ್ಕಿಲ್ಸ್ ಹಾಗೂ ಸ್ಟೋರೀಸ್ ಎಂಬ 3 ಭಾಗಗಳನ್ನು ಒಳಗೊಂಡಿದ್ದು ಅಕಾಡೆಮಿಕ್ಸ್ ಅಲ್ಲಿ 8,9,10,12ನೆಯ ತರಗತಿಯ ಪಠ್ಯ ಪುಸ್ತಕದ ಪಾಠಗಳ ವಿಡಿಯೋ ಗಳಿದ್ದು, ಸ್ಕಿಲ್ಸ್ ಅಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಅಂದರೆ ಡಿವೈಸ್ , ಡಿವೈಸ ಸೆಪ್ಟಿ,ಹಾರ್ಡ್ವೇರ್ ಅಂಡ್ ಸಾಪ್ಟ್ವೇರ್, ಇಂಟರ್ನೆಟ್, ಇಮೇಲ್, ಗೂಗಲ್ ಡ್ರೈವ್ ಹಾಗೂ ಇನ್ನಿತರ ಡಿಜಿಟಲ್ ಸಾಕ್ಷರತೆ ಬಗ್ಗೆ ವಿಡಿಯೋ ಗಳನ್ನು ನೀಡಲಾಗಿದೆ. ಹಾಗೂ ಸ್ಟೋರೀಸ್ ಅಲ್ಲಿ ಚಿಕ್ಕ ಮಕ್ಕಳಿಗಾಗಿ ಕಥೆಗಳನ್ನು ನೀಡಲಾಗಿದ್ದು. ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಅಳವಡಿಸಲಾಗಿದೆ . ಇದರ ಮುಖಾಂತರ ಗ್ರಾಮೀಣ ಭಾಗದ ಮಕ್ಕಳು ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿಕೊಟ್ಟರು .