ಡೈಲಿ ವಾರ್ತೆ: 21/Mar/2024

ಬೆಳಿಗ್ಗೆ ಬಿಸಿ ನೀರಿಗೆ ಬೆಲ್ಲವನ್ನು ಸೇರಿಸಿ ಕುಡಿದ್ರೆ ಅರೋಗ್ಯಕ್ಕೆ ಉಪಯೋಗಗಳು – ಇಲ್ಲಿದೆ ಮಾಹಿತಿ

ಅರೋಗ್ಯ: ಹಿಂದೆ ಮನೆಗೆ ಯಾರಾದರೂ ನೆಂಟರಿಷ್ಟರು ಅಥವಾ ಪರಿಚಯಸ್ಥರು ಬಂದರೆ ಆಗ ಹೆಚ್ಚಾಗಿ ಬೆಲ್ಲ ನೀರು ಮೊದಲು ನೀಡುತ್ತಿದ್ದರು. ಆದರೆ ಇವತ್ತಿನ ದಿನಗಳಲ್ಲಿ ತಂಪು ಪಾನೀಯವನ್ನು ನೀಡಲಾಗುತ್ತದೆ.

ಇನ್ನೂ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು. ಇದಕ್ಕೆ ಇನ್ನೊಂದು ಸಾಮಗ್ರಿ ಸೇರ್ಪಡೆ ಮಾಡಿದರೆ ಅದರ ಲಾಭವು ದುಪ್ಪಟ್ಟು ಆಗುವುದು.
ಅದೇನೆಂದರೆ ಬೆಳಗ್ಗೆ ಹಲ್ಲುಜ್ಜುವ ಮೊದಲು ಬಿಸಿ ನೀರು ಮತ್ತು ಬೆಲ್ಲ ಹಾಕಿ ಕುಡಿದರೆ ಅದು ಚರ್ಮ ಹಾಗೂ ಆರೋಗ್ಯದ ಮೇಲೆ ಅದ್ಭುತವಾದ ಪರಿಣಾಮ ಬೀರುವುದು.

ಹಾಗಾದರೆ ಬೆಳಿಗ್ಗೆ ಬಿಸಿ ನೀರಿಗೆ ಬೆಲ್ಲವನ್ನು ಸೇರಿಸಿ ಕುಡಿದ್ರೆ ಏನೇನು ಆರೋಗ್ಯ ಪ್ರಯೋಜನಗಳಿವೆ ಅಂತ ತಿಳಿಯೋಣ.

ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ನಿವಾರಣೆ ಮಾಡಲು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ಕಲ್ಲನ್ನು ವಿಘಟಿಸುವುದು. ಸಣ್ಣ ಗಾತ್ರದ ಕಲ್ಲನ್ನು ಮೂತ್ರದ ಮೂಲಕ ಹೊರಹಾಕಲು ಇದು ಸಹಕಾರಿ ಆಗಿರುವುದು.

ಸಕ್ಕರೆ ಬದಲಿಗೆ ಬೆಲ್ಲ ತಿಂದರೆ ಅದರಿಂದ ಬಾಯಿ ಹಾಗೂ ಒಸಡುಗಳ ಆರೋಗ್ಯವು ಉತ್ತಮವಾಗಿ ಇರುವುದು. ಬೆಲ್ಲವನ್ನು ಏಲಕ್ಕಿ ಜತೆಗೆ ಸೇರಿಸಿಕೊಂಡು ತಿಂದರೆ ಅದು ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಅಲ್ಲದೇ ಬಾಯಿಯ ದುರ್ವಾಸನೆಯು ಹೋಗುವುದು ಮತ್ತು ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಣೆಯಾಗಿ ಅದರಿಂದ ಬಾಯಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗೆ ಪರಿಹಾರ ಮಾರ್ಗ.

ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಾ ಇರುವವರಿಗೆ ಇದು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ

ಮೊಡವೆ ಮತ್ತು ಚರ್ಮದ ಹಲವು ಸಮಸ್ಯೆಯಿದ್ದರೆ ಆಗ ನೀವು ಬಿಸಿ ನೀರಿಗೆ ಹಾಕಿಕೊಂಡು ಬೆಲ್ಲ ಸೇವಿಸಬೇಕು. ಇದು ಶುದ್ಧೀಕರಿಸುವ ಗುಣ ಹೊಂದಿದೆ ಮತ್ತು ಚರ್ಮದ ಸಮಸ್ಯೆಯನ್ನು ದೂರ ಮಾಡಲು ಇದು ಅದ್ಭುತವಾದ ಮನೆಮದ್ದಾಗಿದೆ. ಇದು ವಯಸ್ಸಾಗುವ ಲಕ್ಷಣಗಳನ್ನು ಕೂಡ ತಡೆಹಿಡಿಯುವುದು.

ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ರಾತ್ರಿ ಮಲಗುವ ಮೊದಲು ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ನಿವಾರಣೆಯಾಗುವುದು.

ನಿತ್ಯವೂ ಸೀಮಿತ ಪ್ರಮಾಣದಲ್ಲಿ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.

ಬೆಳಗ್ಗೆ ಬಿಸಿ ನೀರಿನೊಂದಿಗೆ ಬೆಲ್ಲ ಸೇವನೆ ಮಾಡಿದ್ರೆ ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು.

ಬೆಲ್ಲವು ಖಿನ್ನತೆ ವಿರೋಧಿ ಗುಣ ಹೊಂದಿದೆ. ಬಿಸಿ ನೀರಿನ ಜತೆಗೆ ರಾತ್ರಿ ಮಲಗುವ ಮೊದಲು ಕುಡಿದರೆ ಅದು ದೇಹದಲ್ಲಿ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡುವುದು. ಖಿನ್ನತೆಗೆ ಒಳಗಾಗಿರುಂತಹ ಜನರಿಗೆ ರಾತ್ರಿ ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು. ನಿದ್ರಾಹೀನತೆಗೆ ಶತಮಾನಗಳಿಂದಲೂ ಬೆಲ್ಲವನ್ನು ಮನೆಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ.