ಡೈಲಿ ವಾರ್ತೆ: 20/Mar/2024

ಮಳಿಯಲ್ಲಿ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ಕಾವು ವತಿಯಿಂದ ಹಾಲು ಶೇಖರಣೆ…

ಪೆರ್ನಾಜೆ: ಪೆರ್ನಾಜೆ ಸೊಸೈಟಿ ಈಗಾಗಲೇ ವ್ಯವಹಾರ ಮಾಡದೆ ಇರುವುದು ತಮಗೆ ತಿಳಿದಿರುವ ವಿಚಾರ ಆ ಪ್ರಯುಕ್ತ ಪೆರ್ನಾಜೆ ಪರಿಸರದ ಹಾಲು ಉತ್ಪಾದಕರು ಕಾವು ಸೊಸೈಟಿಗೆ ಹಾಲು ತರುತ್ತಿದ್ದು ಕೆಲವರಿಗೆ ಇಷ್ಟು ದೂರ ಹಾಲು ದಿನ ಪ್ರತಿ ಸರಬರಾಜು ಮಾಡುವುದು ಕಷ್ಟ ಸಾಧ್ಯವಾಗಿರುವುದನ್ನು ಪರಿಗಣಿಸಿ ಮಾ.20ರಂದು ವೆಂಕಟಕೃಷ್ಣ ಮಧು ಮಲ್ಟಿಪಲ್ಸ್ ಮಳಿ ಇವರಲ್ಲಿ ಸಭೆಯನ್ನು ಕರೆಯಲಾಗಿತ್ತು .ಸರಕಾರದಿಂದ ದ.ಕ ಹಾಲು ಒಕ್ಕೂಟ ದಿಂದ ಸಿಗುವ ಸೌಲಭ್ಯಗಳು ಹಸುವಿನ ಸಾಕಾಣಿ ಕರು, ಆಹಾರ ಹಸಿರು ಮೇವಿನ ಬೆಳೆಯುವ ಬಗ್ಗೆ ಸಿಗುವ ಸಾಲ ಸೌಲಭ್ಯಗಳನ್ನು ಉಪವ್ಯವಸ್ತಾಪಕರು ಡಾ. ಸತೀಶ್ ರಾವ್ ಸಂದರ್ಭೋಚಿತವಾಗಿ ಸಲಹೆ ನೀಡಿದರು.


ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಶ್ರೀಮತಿ ಮಾಲತಿಯವರು ಹಸು ಕರುವಿಗೆ ಸಿಗುವ ಸಾಲ ಸೌಲಭ್ಯ ಹೆಣ್ಣು ತಳಿ ಕರುಗಳ ಕೃತಕ ಗರ್ಭಧಾರಣೆ ಬಗ್ಗೆ ಮಾಹಿತಿ ನೀಡಿದರು ಸಮಾರಂಭದ ಅಧ್ಯಕ್ಷರಾಗಿ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘ .ನಿ ಕಾವು ಚಂದ್ರಶೇಖರ್ ರಾವ್ ನಿಧಿಮುಂಡ ಇವರು ಉತ್ತಮ ಗುಣಮಟ್ಟದ ಹಾಲು ನೀಡಿ ಹೆಚ್ಚಿನ ಸಹಕಾರ ನೀಡಿ ಸಂಘದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದರು.


ಪೆರ್ನಾಜೆ ಹಾಲು ಸೊಸೈಟಿ ಸದಸ್ಯತನದ ಬಗ್ಗೆ ಚರ್ಚಿಸಲಾಯಿತು .ಅಧಿಕಾರಿಗಳು ಸೂಕ್ತ ಭರವಸೆಯನ್ನು ಸದಸ್ಯರುಗಳಿಗೆ ತಿಳಿಸಿದರು ಸಮಾರಂಭದಲ್ಲಿ ಮಳಿ ರಾಮಚಂದ್ರ ಭಟ್, ಕುಮಾರ್ ಪೆರ್ನಾಜೆ, ಎ ದಿವ್ಯನಾಥ್ ಶೆಟ್ಟಿ, ದಿನೇಶ್ ಗೌಡ ,ಶರತ್ ಕೆ ವೆಂಕಟರಮಣ ಭಟ್ ,ಇಂದುಶೇಖರ ,ವೀಣಾ ಸುಮನ ,ಪರಮೇಶ್ವರಿ ,ನಿರ್ಮಲ , ಸಿಎಚ್ ಪ್ರೇಮಲತಾ ,ಯಶೋಧ ,ಹೇಮಲತಾ ,ಸುನಿಲ್ ಭವಾನಿ ,ಬಾಲಕೃಷ್ಣ ಸಿ. ಮಧು ಮಲ್ಟಿಪಲ್ಸ್ ವೆಂಕಟಕೃಷ್ಣ ಮಳಿ ಸ್ವಾಗತಿಸಿದರು.
ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯರು ವಂದಿಸಿದರು.