ಡೈಲಿ ವಾರ್ತೆ: 16/April/2024

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಂದ ಗ್ರಾಮ, ಮನೆ, ಮನ ಸಂಪರ್ಕ ಅಭಿಯಾನ

ಬಂಟ್ವಾಳ  : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ  ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ, ಮನೆ, ಮನ ಸಂಪರ್ಕ ಅಭಿಯಾನ   ಕಾರ್ಯಕ್ರಮದ ಅಂಗವಾಗಿ ಸೋಮವಾರ ಬಂಟ್ವಾಳದ  ಕಳ್ಳಿಗೆ  ಗ್ರಾಮದ ಬೆಂಜನಪದವು, ದರಿಬಾಗಿಲು, ಚಂದ್ರಿಗೆ, ಗಾಂದೋಡಿ  ಮತದಾರರ ಮನೆಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.

      ಲೋಕಸಭಾ ಅಭ್ಯರ್ಥಿಯ ಪರಿಚಯ ಪತ್ರ, ಹಾಗೂ ಮೋದಿ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ನೀಡಲಾಯಿತು.

    ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು  ಮಾತನಾಡಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಮತವನ್ನು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ನೀಡಬೇಕು. ನಾನು ಕ್ಷೇತ್ರದ ಜನರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಮನವಿಗೆ ಬೆಲೆ ನೀಡುತ್ತೀರಿ ಎಂಬ ಭರವಸೆ ನನಗಿದೆ ಎಂದರು.

     ಸಾಮಾನ್ಯ ಜನರ ಜೀವನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನೆಗಳನ್ನು ಜಾರಿ ಮಾಡಿದೆ. ಇದರ ಜೊತೆಗೆ ಕೃಷಿಕರಿಗೆ, ಹಿರಿಯ ನಾಗರಿಕರಿಗೆ, ಶಿಕ್ಷಣಕ್ಕೆ , ಆರೋಗ್ಯ ಹೀಗೆ ಸರ್ವ ಕ್ಷೇತ್ರಕ್ಕೂ  ಸರ್ವರ ಬಾಳಿಗೆ ನೆರವಾಗುವ ರೀತಿಯಲ್ಲಿ ಸಹಬಾಳ್ವೆಗೆ ಸಹಕಾರವಾಗುವ ರೀತಿಯ ಬದುಕಿಗೆ ಪೂರಕವಾದ ವಾತವರಣವನ್ನು ಮೋದಿಯವರು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದವರು ತಿಳಿಸಿದರು.

     ಮಾಜಿ ಶಾಸಕ ಎ‌.ರುಕ್ಮಯ ಪೂಜಾರಿ,  ಜಿ‌.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ  ಪುರುಷೋತ್ತಮ ಕೊಟ್ಟಾರಿ, ಸದಸ್ಯರಾದ ದಾಮೋದರ ನೆತ್ತರಕೆರೆ, ರೇಶ್ಮಾ, ಮನೋಜ್ ಕಳ್ಳಿಗೆ ಪ್ರಮುಖರಾದ ದಿನೇಶ್ ಶೆಟ್ಟಿ ದಂಬೆದಾರ್, ಯೋಗೀಶ್ ದರಿಬಾಗಿಲು, ಅಖೇಶ್ ಬೆಂಜನಪದವು, ಅಭಿನ್ ರೈ, ಪ್ರವೀಣ್ ಬೆಂಜನಪದವು, ಶಾರದ ಕೋಟೇಶ್,ವಸಂತಿ ಮನೋಹರ್, ಸುಗಂದಿ ಕಮಲಾಕ್ಷ, ನಮಿತಾ ಸುರೇಶ್, ಕಾರ್ತಿಕ್ ಬೆಂಜನಪದವು, ಪ್ರದೀಪ್ ಬೆಂಜನಪದವು, ಸಾತ್ವಿಕ್, ಯಶೋಧರ, ಕೇಶವ ಕುಲಾಲ್ ಮತ್ತಿತರರು ಭಾಗವಹಿಸಿದ್ದರು.