ಡೈಲಿ ವಾರ್ತೆ: 18/April/2024

ಕಾಲೇಜಿನಲ್ಲೇ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಕೊಲೆ:
ಯುವಕನ ಬಂಧನ

ಹುಬ್ಬಳ್ಳಿ: ಯುವಕನೊಬ್ಬ ವಿದ್ಯಾರ್ಥಿನಿಗೆ ಮನಸೋ ಇಚ್ಚೆ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಇಲ್ಲಿನ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಆವರಣದಲ್ಲಿ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿನಿಯನ್ನು ನೇಹಾ ಹಿರೇಮಠ ಎಂದು ಗುರುತಿಸಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದವರು ವಿದ್ಯಾರ್ಥಿನಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಘಟನೆಯಿಂದ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿನಿ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿಯಾಗಿದ್ದಾರೆ.
ಮಾಸ್ಕ್ ಧರಿಸಿದ ಯುವಕನೊಬ್ಬ ನೇಹಾ ಅವರ ಮೇಲೆ ಮನಸ್ಸು ಇಚ್ಛೆ ಚಾಕುವಿನಿಂದ ಹಲ್ಲೇ ಮಾಡಿದ್ದಾನೆ. ಈ ದುಷ್ಕೃತ್ಯ ಎಸೆಗಿರುವ ಯುವಕ ಅದೇ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ.  ಚಾಕುವಿನಿಂದ ಇರಿದು ಕೊಲೆ ಮಾಡಿದ ಯುವಕನನ್ನು ಫಯಾಜ್ ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಫಯಾಜ್ ನನ್ನು ವಿದ್ಯಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫಯಾಜ್ ಸವದತ್ತಿ ಮೂಲದ ಯುವಕನಾಗಿದ್ದಾನೆ.