



ಡೈಲಿ ವಾರ್ತೆ: 19/April/2024


ಬಜ್ಪೆ: ಚಲಿಸುತ್ತಿದ್ದ ಲಾರಿಯೊಂದು ಬ್ರೇಕ್ ಫೇಲ್ ಆಗಿ ಅಂಗಡಿ, ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ- ಹಲವು ವಾಹನಗಳು ಜಖಂ!
ಬಜ್ಪೆ : ಮಣ್ಣು ತುಂಬಿದ ಬೃಹತ್ ಲಾರಿಯೊಂದು ಬ್ರೇಕ್ ಫೈಲ್ ಆಗಿ ರಸ್ತೆಬದಿಯ ಅಂಗಡಿಗಳಿಗೆ ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಶುಕ್ರವಾರ ಸಂಜೆ ಬಜ್ಪೆ ಎಡಪದವು ಪೇಟೆಯಲ್ಲಿ ನಡೆದಿದೆ.
ಮಂಗಳೂರು- ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಈ ಅವಘಡ ನಡೆದಿದ್ದು ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಗುದ್ದಿ ಬಳಿಕ ಖಾಸಗಿ ಬಸ್, ಲಾರಿ ಮತ್ತು ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾಗಿದೆ.
ಲಾರಿ ಕಟ್ಟಡಕ್ಕೆ ಗುದ್ದಿದ ಪರಿಣಾಮ ಮೂರು ಅಂಗಡಿಗಳಿಗೆ ಭಾರಿ ಹಾನಿಯಾಗಿದೆ. ಅಲ್ಲದೆ ಲಾರಿ, ಖಾಸಗಿ ಬಸ್ ಜಖಂ ಗೊಂಡಿದ್ದು, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ಸ್ಕೂಟರ್ ಗಳು ಜಖಂಗೊಂಡಿದೆ
ಅದೃಷ್ಟವಶಾತ್ ಭಾರೀ ಅವಘಡ ತಪ್ಪಿ ಹೋಗಿದೆ.
ಬ್ರೇಕ್ ಫೇಲ್ ಆದ ಲಾರಿಯ ಚಾಲಕ ಮತ್ತು ಮತ್ತೊಂದು ಲಾರಿಯ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.
ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.