ಡೈಲಿ ವಾರ್ತೆ: 22/April/2024

ಬೆಂಗಳೂರು: ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆ ಪ್ರಕರಣ- ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಸೇರಿ ಮೂವರ ವಿರುದ್ಧ ಎಫ್ ಐಆರ್ ದಾಖಲು.

ಮೈಸೂರು – ಕೊಡಗು, ದಕ್ಷಿಣ ಕನ್ನಡ ಬೂತ್ ಕಾರ್ಯಕರ್ತರಿಗೆ ಹಣ ಹಂಚಲು ಆಗಿತ್ತು ಮಾಸ್ಟ‌ರ್ ಪ್ಲಾನ್ !


ಬೆಂಗಳೂರು:  ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ವೇಳೆ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆಯಾಗಿದೆ ಇದರ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದ್ದು, ಹಣ ಜಪ್ತಿ ಮಾಡಿಕೊಂಡ ಇಲಾಖೆ ತನಿಖೆ ಚುರುಕುಗೊಳಿಸಿದೆ.

ಕಳೆದ ಶನಿವಾರ ಮಧ್ಯಾಹ್ನ ಕಾಟನ್ ಪೇಟೆ ಪೊಲೀಸ್‌ ಠಾಣಾ ಕಾರಿನಲ್ಲಿ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುವಾಗ 2 ಕೋಟಿ ಹಣ ಪತ್ತೆ ಹಿನ್ನೆಲೆ ಚುನಾವಣಾಧಿಕಾರಿ ರವಿ ಅಸೂತಿ ಎಂಬುವರು ನೀಡಿದ ದೂರಿನ ಮೇರೆಗೆ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಲೊಕೇಶ್ ಅಂಬೆಕಲ್, ಹಣ ಸಾಗಿಸುತ್ತಿದ್ದ ವೆಂಕಟೇಶ್ ಪ್ರಸಾದ್‌ ಹಾಗೂ ಗಂಗಾಧ‌ರ್ ಎಂಬುವರ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ. ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ಹಣ ಜಪ್ತಿ ಮಾಡಿಕೊಂಡಿದ್ದು, ಆರೋಪಿತರನ್ನು ಹೆಚ್ಚಿನ ನೊಟೀಸ್ ಜಾರಿ ಮಾಡಿದ್ದಾರೆ.

ಇಬ್ಬರು ವಿಚಾರಣೆ ನಡೆಸಲು ಕೋದಂಡರಾಮಪುರ ಕೆನೆರಾ ಬ್ಯಾಂಕಿನಲ್ಲಿ ಕಳೆದ ಮಾರ್ಚ್ 27ರಂದು 5 ಕೋಟಿ ರೂಪಾಯಿ ಹಣ ವಿತ್ ಡ್ರಾ ಮಾಡಲಾಗಿದ್ದು, ಈ ಪೈಕಿ 2 ಕೋಟಿ ಹಣವನ್ನು ಮೈಸೂರು ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಬೂತ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆ ಹಣ ಹಂಚಲು ಹೋಗುತ್ತಿರುವುದಾಗಿ ಆರೋಪಿತರು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದರು. ಈ ವೇಳೆ, ಪತ್ತೆಯಾದ ಪತ್ರದಲ್ಲಿ ಮೇಲಿನ ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಣ ಹಂಚಲು ವೆಂಕಟೇಶ್ ಮೂಲಕ ಹಣ ಸಾಗಿಸುತ್ತಿರುವ ಬಗ್ಗೆ ಉಲ್ಲೇಖವಾಗಿತ್ತು ಎಂದು ಚುನಾವಣಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.

ಈ ಸಂಬಂಧ ಪೊಲೀಸರ ಸಮಕ್ಷಮದಲ್ಲಿ ಹಣ ಎಣಿಕೆ ಮಾಡಿ ವಶಕ್ಕೆ ಪಡೆದುಕೊಂಡು ತನಿಖೆಯನ್ನ ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.