ಡೈಲಿ ವಾರ್ತೆ: 22/April/2024
ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ಅವಶ್ಯಕತೆಗಳ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ
ಕೋಟ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಪ್ರತ್ಯೇಕವಾದ ಪ್ರಣಾಳಿಕೆಯನ್ನು ರೂಪಿಸಲಾಗಿದೆ.
ಪ್ರಣಾಳಿಕೆಯಲ್ಲಿ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಚಾರಗಳು ಇದೆ. ಆದರೆ ಇಚ್ಛಾಶಕ್ತಿ ಹಾಗೂ ಸಂಪರ್ಕವಿದ್ದರೆ ಸಂಸದನಿಗೆ ರಾಜ್ಯ ಸರಕಾರದ ಕೆಲಸಗಳನ್ನು ಮಾಡಬಹುದು ಎಂದು ಏ. 22 ರಂದು ಸೋಮವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ
ಜಯಪ್ರಕಾಶ್ ಹೆಗ್ಡೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು.
ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ಅವಶ್ಯಕತೆಗಳ ಪ್ರತ್ಯೇಕ ಪ್ರಣಾಳಿಕೆ ವಿವರ:
ಮೀನುಗಾರಿಕೆ, ಬಂದರು ಅಭಿವೃದ್ಧಿ:-
ಅಳಿವೆ ಮತ್ತು ಬಂದರಿನ ಡ್ರಜ್ಜಿಂಗ್ ಹಾಗೂ ಬ್ರೇಕ್ ವಾಟರ್ ಯೋಜನೆಗಳಿಗೆ ಒತ್ತು,
ಮೀನುಗಾರಿಕಾ ಬಂದರಿನ ಸ್ವಚ್ಚತೆಗೆ ಆದ್ಯತೆ ನೀಡುವುದು. ಅಸಂಘಟಿತ ಕಾರ್ಮಿಕರಿಗೆ
ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಮೀನುಗಾರಿಕಾ ಕಾರ್ಮಿಕರಿಗೂ ವಿಸ್ತರಿಸಲು
ಪ್ರಯತ್ನಿಸುವುದು. ಸಾಂಪ್ರದಾಯಿಕ ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ, ನಿವೃತ್ತ
ಮೀನುಗಾರರಿಗೆ ಪಿಂಚಣಿ ಸೌಲಭ್ಯಕ್ಕೆ ಪ್ರಯತ್ನ, ನಾಡ ದೋಣಿ ಸೀಮೆ ಎಣ್ಣೆ ಸಹಾಯಧನವನ್ನು ಕನಿಷ್ಠ 50 ರೂಪಾಯಿಗೆ ಹೆಚ್ಚಳ, ಸಂಕಷ್ಟ ಪರಿಹಾರ ಸಹಾಯಧನವನ್ನು ರೂ. 10 ಲಕ್ಷಕ್ಕೆ ಹಾಗೂ ಮತ್ಸಾಶ್ರಯ ಯೋಜನೆಯ ಸಹಾಯಧನವನ್ನು 5 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸುವುದು. ಪ್ರಧಾನಿ ಮತ್ಸಾ ಸಂಪದ ಯೋಜನೆಯ ಸದುಪಯೋಗಕ್ಕೆ ಶ್ರಮಿಸುವುದು. 1984ರ ಮೀನುಗಾರಿಕಾ ಕಾಯ್ದೆಗೆ ಸೂಕ್ತ ತಿದ್ದುಪಡಿ, ಮೀನುಗಾರಿಕೆಗೆ ಸಂಬಂಧಪಟ್ಟ
ಎಲ್ಲಾ ಇನ್ಸೂರೆನ್ಸ್ ಕ್ಷೇಮ್‌ಗಳನ್ನು ಕಾಲಮಿತಿಯೊಂದಿಗೆ ಪಾವತಿ ಮಾಡಲು ಕ್ರಮಗಳನ್ನು
ಜಾರಿಗೊಳಿಸುವುದು. ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಹವಾಮಾನ
ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನ. ಮೀನುಗಾರಿಕೆ ಹಾಗೂ ಬೋಟ್ ಇಂಜಿನ್ ಅಶ್ವಶಕ್ತಿಗನುಗುಣವಾಗಿ ವಾರ್ಷಿಕ ಕೋಟಾ ಹೆಚ್ಚಿಸುವುದು ಹಾಗೂ ಕನಿಷ್ಠ ದಿನವಹಿ 500 ಲೀಟರ್ ಡೀಸೆಲ್ ನೀಡಲು ಪ್ರಯತ್ನಿಸುವುದು. ಹೊರ ರಾಜ್ಯದ ಅಕ್ರಮ ಮೀನುಗಾರಿಕೆಯನ್ನು
ನಿಷೇದಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಪ್ರವಾಸೋದ್ಯಮ ಕ್ಷೇತ್ರ:-
ಉಭಯ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ’ಪ್ರವಾಸೋದ್ಯಮ ನೀತಿ, ಹೋಂ ಸ್ಟೇಗಳಿಗೆ ಹಾಗೂ ಸಮುದ್ರ ತೀರದ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಇಲಾಖೆಗಳಿಂದ
ಆಗುತ್ತಿರುವ ಕಾನೂನಿನ ನಿರ್ಭಂದಗಳನ್ನು ಸರಳೀಕರಣ ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿ. ಮಲೆನಾಡಿಗೆ ಪೂರಕವಾಗಿರುವ ಮಿನಿ ಬಸ್ ಸಂಪರ್ಕ ಜಾಲವನ್ನು ವಿಸ್ತರಿಸುವಂತೆ
ಕೆ.ಎಸ್.ಆರ್.ಟಿ.ಸಿ.ಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.
ಅರಣ್ಯ ಕಾಯ್ದೆ ಸರಳೀಕರಣ:-
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಮೀನನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನಕ್ಕೆ ಕ್ರಮ, ಪಾರಂಪರಿಕ ಅರಣ್ಯ ಕಾಯ್ದೆಯಡಿ ಭೂ ಮಂಜೂರಾತಿಯ ಕಾಲ” ಮಿತಿಯನ್ನು ಅವಶ್ಯಕ ಪ್ರಸಕ್ತ 75 ವರ್ಷಗಳ ದಾಖಲೆಗಳನ್ನು 25 ವರ್ಷಕ್ಕೆ ಇಳಿಸಿ ಅರಣ್ಯವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡುವುದು, ಅರಣ್ಯ ಕಾಯಿದೆಯ ಸೆಕ್ಷನ್ 4 ಸರಳೀಕರಣ.
ಕೃಷಿ ಹೈನುಗಾರಿಕೆ ಕ್ಷೇತ್ರ :-
’ಅಡಿಕೆ ಸಂಶೋಧನಾ ಕೇಂದ್ರ’ವನ್ನು ಕ್ರಿಯಾಶೀಲಗೊಳಿಸುವುದು, ಅಡಿಕೆ ಬೆಳೆಗಾರರ
ಹಿತರಕ್ಷಣೆಗಾಗಿ ನೇಮಿಸಿದ್ದ ಗೋರಖ್ ಸಿಂಗ್ ವರದಿಯ ಅನುಷ್ಠಾನ, ಎಲೆಚುಕ್ಕಿ ರೋಗದ
ಶಾಶ್ವತ ನಿವಾರಣೆಗಾಗಿ ಸಂಶೋಧನೆಗೆ ಅಗತ್ಯ ಕ್ರಮ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆ.ಎಮ್.ಎಫ್ ಹಾಲಿನ ಘಟಕ ಸ್ಥಾಪಿಸಿ ಹೈನುಗಾರಿಕೆಗೆ ಉತ್ತೇಜನ. ’ನೀರಾ’ ಅನೌಪಚಾರಿಕ ಉದ್ಯೋಗವನ್ನು ಸೃಷ್ಟಿಸಲು ಕೃಷಿ ಕಾರ್ಯಕ್ರಮ. ಮಲೆನಾಡಿನ ಕೃಷಿ ಉತ್ಪನ್ನಗಳಿಗೆ
ಜಾಗತಿಕ ಬ್ರಾಂಡ್ ನೀಡಲು ಕ್ರಮ, ತರೀಕೆರೆ ತಾಲ್ಲೂಕಿನ ಇತರ ಪ್ರಮುಖ ಬೆಳೆಗಳಾದ ಈರುಳ್ಳಿ ಹಾಗೂ ಇತರ ತರಕಾರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳಿಗೆ ಪರಿಹಾರ ಮೊತ್ತವನ್ನು
ಹೆಚ್ಚಳ, ಮಲೆನಾಡಿನ ಮನೆಗಳನ್ನು ಕ್ರಮಬದ್ಧವಾದ ನಿವೇಶನವೆಂದು ತೀರ್ಮಾನಿಸಿ ನಮೂನೆ 9 ಮತ್ತು 11ಎ ನೀಡಲು ಪ್ರಯತ್ನಿಸುವುದು. ’ಮಲೆನಾಡ ದಿನಾಚರಣೆ ಮೂಲಕ ಅಲ್ಲಿನ ಜನ
ಜೀವನ, ಕೃಷಿ, ಪರಂಪರೆ, ಜನಪದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಕ್ರಮ.
ವೈದ್ಯಕೀಯ ಕಾಲೇಜು:-
ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಉಭಯ ಜಿಲ್ಲೆಗಳಲ್ಲಿ ಸರಕಾರಿ
ಇಂಜಿನಿಯರಿಂಗ್ ಕಾಲೇಜು, ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ
ಸುಸಜ್ಜಿತ ’ಸ್ಪೋರ್ಟ್ ಕಾಂಪ್ಲೆಕ್ಸ್ ನಿರ್ಮಾಣ, ಕೈಗಾರಿಕೆಗಳಿಗೆ ಸೂಕ್ತ ಕೈಗಾರಿಕಾ
ನಿವೇಶನ ಒದಗಿಸಲು ಕ್ರಮ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸೂಕ್ಷ್ಮ ಮತ್ತು
ಸಣ್ಣ ಕೈಗಾರಿಕೆಗಳಿಗೆ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಪ್ರಯತ್ನ ಸರಕಾರಿ ಆಸ್ಪತ್ರೆಗಳ ಉನ್ನತೀಕರಣ. ಮಲೆನಾಡು ಭಾಗದಲ್ಲಿ ಕೃಷಿ ಪೂರಕ ಉದ್ಯಮದ
ಸ್ಥಾಪನೆಗೆ ವಿಶೇಷ ಕಾರಿಡಾರ್. ನೀರಾ’ ಕ್ಷೇತ್ರದಾದ್ಯಂತ 5 ವಿವಿಧ ಸ್ಥಳಗಳಲ್ಲಿ ಶುದ್ದೀಕರಣ ಘಟಕ/ಸ್ಟೋರೇಜ್ ಕ್ಲಸ್ಟರ್ ಕನಸುಗಳಿದೆ ಎಂದರು.