ಡೈಲಿ ವಾರ್ತೆ: 23/April/2024
ಕುಲಾಲ ಸಮುದಾಯ ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರ ಜೊತೆ ಸಂವಾದ ನಡೆಸಿದ ಬ್ರಿಜೇಶ್ ಚೌಟ
ಬಂಟ್ವಾಳ : ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ವೇಳೆ ಕುಲಾಲ ಸಮುದಾಯ ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರ ಜೊತೆ ಸಂವಾದ ನಡೆಸಿದರು.
ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿದ ಅವರು ರಾಷ್ಟ್ರೀಯತೆ ಮತ್ತು ಹಿಂದೂ ವಿಚಾರಧಾರೆಗಳಿಗೆ ಗೌರವ ತರುವುದರ ಜೊತೆಗೆ ಪ್ರಮಾಣಿಕವಾಗಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರು .
ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಕಾರ್ಯಕರ್ತರ ಗೆಲುವು ಪಕ್ಷದ ಗೆಲುವಾಗಲಿದೆ. ಪಕ್ಷ ಸಂಘಟಿತವಾಗುವುದರ ಜೊತೆಗೆ ಅಭ್ಯರ್ಥಿ ಗೆಲುವು ಸಾಧಿಸಿದರೆ ಕಾರ್ಯಕರ್ತ ಬಲಿಷ್ಠವಾಗುತ್ತಾನೆ. ಹಾಗಾಗಿ ಪ್ರತಿಯೊಂದು ಬೂತ್ ಗಳಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡು ಬೂತ್ ನಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡಿ ಎಂದು ಮನವಿ ಮಾಡಿಕೊಂಡರು.
ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಪ್ರತಿಯೊಂದು ನಿಮಿಷಗಳು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಕಾರ್ಯಕರ್ತರು ವಿರಮಿಸದೆ ನಿರಂತರವಾಗಿ ಮನೆ, ಮನಗಳನ್ನು ಪರಿವರ್ತನೆ ಮಾಡಿ ಬಿಜೆಪಿ ಗೆಲುವಿಗೆ ಕಾರಣರಾಗಬೇಕು ಎಂದು ವಿನಂತಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಎಲ್ಲಾ ಸಮಾಜದ ಮೇಲೆ ಪರಿಣಾಮ ಬೀರುವ ಭವಿಷ್ಯದ ಚುನಾವಣೆ ಇದಾಗಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಂಡಿರುವ ಯೋಜನೆಗಳಿಗೆ ಈ ವರ್ಷದ ಲೋಕಸಭಾ ಚುನಾವಣೆ ಶಕ್ತಿ ನೀಡುವಂತಹ ಚುನಾವಣೆಯಾಗಿದೆ ಎಂದು ತಿಳಿಸಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಜಗದೀಶ್ ಶೇಣವ, ಪೂಜಾ ಪೈ, ಗ್ರಾ.ಪಂ.ಉಪಾಧ್ಯಕ್ಷ ಚಂದ್ರಹಾಸ ಪೂಜಾರಿ, ಸದಸ್ಯರಾದ ಮಮತಾ ಪೂಜಾರಿ, ಉಮೇಶ್ ಶೆಟ್ಟಿ, ಗೀತಾ, ರಘವೀರ ಆಚಾರ್ಯ, ಪ್ರಕಾಶ್ ಆಳ್ವ, ಪ್ರಮುಖರಾದ ದೇವಪ್ಪ ಪೂಜಾರಿ, ನಂದರಾಮ ರೈ, ರಮೇಶ್ ಭಟ್ಟಾಜೆ,, ಮೋಹನ್ ದಾಸ್ ಕೊಟ್ಟರಿ, ಸಂದೇಶ್ ಶೆಟ್ಟಿ ಅರೆಬೆಟ್ಟು, ಹರಿಪ್ರಸಾದ್ ಕುಲಾಲ್ , ರಾಧಾಕೃಷ್ಣ ಕುಲಾಲ್,ಮಚ್ಚೇಂದ್ರ ಸಾಲಿಯಾನ್, ಮನೋಜ್ ಆಚಾರ್ಯ, ಡೊಂಬಯ್ಯ ಅರಳ, ಜನಾರ್ದನ ಬೊಂಡಾಲ, ಸುರೇಶ್ ಕೊಟ್ಯಾನ್, ಚಂದ್ರಹಾಸ ಪೂಜಾರಿ,ತಿರುಲೇಶ್, ತಿರುಮಲೇಶ್,ತಿಮ್ಮಪ್ಪ ವಿಶ್ವಂಭರ, ಮೋಹನ್ ಮೇಲಾಂಟ, ತಿಮ್ಮಪ್ಪ ರೈ, ಸವಿತಾ ಶೆಟ್ಟಿ, ನಿರಂಜನ ಸೇಮಿತ, ಬಾಲಕೃಷ್ಣ ಶೆಟ್ಟಿ,ಜಯಂತ ತಂಬಡಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪ್ರಸಾದ ಸ್ವೀಕರಿಸಿದರು.ಕುಲಾಲ ಭವನದಲ್ಲಿ ಕುಲಾಲ ಸಮಾಜದವರೊಂದಿಗೆ ಹಾಗೂ ವಿಶ್ವಕರ್ಮ ಸಭಾ ಭವನದಲ್ಲಿ ವಿಶ್ವಕರ್ಮ ಸಮುದಾಯದವರ ಜೊತೆ ಸಂವಾದ ನಡೆಸಿದರು.
ಇತ್ತೀಚಿಗೆ ಅನಾರೋಗ್ಯದ ಕಾರಣದಿಂದಾಗಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು ಅವರ ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.