ಡೈಲಿ ವಾರ್ತೆ: 11/ಮೇ /2024
ಹೇರಾಡಿ ಬಾರ್ಕೂರು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಎಸ್ಸೆಸ್ಸೆಲ್ಸಿಯಲ್ಲಿ 100% ಫಲಿತಾಂಶ
ಬ್ರಹ್ಮಾವರ: ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರಕೂರು ಇದರ 2023/24 ನೇ ಸಾಲಿನ SSLC ಫಲಿತಾಂಶದಲ್ಲಿ ಶಾಲೆಯು 100% ಫಲಿತಾಂಶ ಬಂದಿರುತ್ತದೆಂದು ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀ ಮತಿ ಲಿಖಿತಾ ಕೊಠಾರಿಯವರು ತಿಳಿಸಿರುತ್ತಾರೆ.
2023/24 ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 42 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100% ಫಲಿತಾಂಶ ದಾಖಲಾಗಿರುತ್ತದೆ.
ಇದರಲ್ಲಿ 17 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 21 ಪ್ರಥಮ ಶ್ರೇಣಿ, 3 ತೃತೀಯ ಹಾಗೂ 1 ಪಾಸಾಗಿರುತ್ತಾರೆ.
ಶ್ರೀಯಾ 604 /625 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. 600 /625ಅಂಕ ಪಡೆದು ಶ್ರೀಕಾ ದ್ವಿತೀಯ ಹಾಗೂ 593 /625 ಅಂಕ ಪಡೆದು ಧನ್ಯ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಥಮ ಭಾಷೆ ಕನ್ನಡದಲ್ಲಿ 124/125 ಅಂಕ ಹಿಮಾನಿ, ದ್ವಿತೀಯ ಭಾಷೆ ಇಂಗ್ಲೀಷ್ ನಲ್ಲಿಕಾರ್ತಿಕ್ 98 /100 ಅಂಕ , ತೃತೀಯ ಭಾಷೆ ಹಿಂದಿಯಲ್ಲಿ 100 /100 ಅಂಕ , ಧನ್ಯ ಮತ್ತು ಶ್ರೀಕಾ, ಗಣಿತ ದಲ್ಲಿ ಶ್ರೀಯಾ 96/100 ಅಂಕ, ವಿಜ್ಞಾನ ದಲ್ಲಿ ಶ್ರೀಯಾ ಮತ್ತು ಶ್ರೀಕಾ 99/100 , ಸಮಾಜ ವಿಜ್ಞಾನ ದಲ್ಲಿ 96/100 ಅಂಕ ಪಡೆದಿರುತ್ತಾರೆ.
100 ಶೇಕಡಾ ಫಲಿತಾಂಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ- ಶಿಕ್ಷಕೇತರ ವರ್ಗ, ಸಂಚಾಲಕರು,ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿಗಳು,ಪೋಷಕರು ಅಭಿನಂದನೆ ಸಲ್ಲಿಸಿರುತ್ತಾರೆ.