ಡೈಲಿ ವಾರ್ತೆ: 13/ಮೇ /2024

ಅಧಿಕಾರಿಗಳ ನಿರ್ಲಕ್ಷದಿಂದ ತ್ಯಾಜ್ಯ ಘಟಕವಾದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತ ಕಚೇರಿ!

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತ ಕಚೇರಿಯ ಕಟ್ಟಡದ ಮೆಟ್ಟಲಿನಲ್ಲಿ  ಮಾಂಸಹಾರಿ ಊಟದ ತ್ಯಾಜ್ಯ ಹಾಗೂ ಮದ್ಯದ ಬಾಟಲಿಗಳನ್ನು ಕಿಡಿಗೇಡಿಗಳು ಹಾಕಿ ಹೋದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತ ಕಚೇರಿಯ ಕೆಳಭಾಗದಲ್ಲಿ  ಕಮರ್ಷಿಯಲ್ ಕಾಂಪ್ಲೆಸಿಗೆ ಹೊಂದಿಕೊಂಡಂತೆ ಕಟ್ಟಡದ ಮೆಟ್ಟಲಿನಲ್ಲಿ ಒಂದಿಷ್ಟು ಮಾಂಸಾಹಾರಿ ಊಟ ಮಾಡಿದ ತ್ಯಾಜ್ಯ ಮದ್ಯದ  ಬಾಟಲಿಗಳನ್ನ  ಕಿಡಿಗೇಡಿಗಳು ಭಾನುವಾರ ರಾತ್ರಿ ಸುರಿದು ಹೋಗಿದ್ದಾರೆ.  ಆದರೆ ಇದರ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಆಶ್ಚರ್ಯಕರವಾಗಿದೆ. ಅಲ್ಲಿ ಸಿಸಿ ಕ್ಯಾಮರಾಗಳು ಇರುವ ಸ್ಥಳದಲ್ಲೇ ಧೈರ್ಯವಾಗಿ ತ್ಯಾಜ್ಯವನ್ನು ಸುರಿದು ಹೋಗುತ್ತಾರೆ ಎಂದರೆ ಆಡಳಿತ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣಿತ್ತಿದೆ.


ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯ ಮುಂಭಾಗ ತ್ಯಾಜ್ಯ ಘಟಕವಾಗುವುದರಲ್ಲಿ ಸಂದೇಹವಿಲ್ಲ.