ಡೈಲಿ ವಾರ್ತೆ: 22/ಮೇ /2024
ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯುವುದರಿಂದ ಅರೋಗ್ಯಕ್ಕೆ ಆಗುವ ಪ್ರಯೋಜನಗಳು
ಸಾಮಾನ್ಯವಾಗಿ ನಾವೆಲ್ಲಾ ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ನಮ್ಮ ಮನೆಯಲ್ಲಿರುವ ಹಿರಿಯರು ನಮಗೆ ‘ಹಾಸಿಗೆಯಿಂದ ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ, ಆರೋಗ್ಯಕ್ಕೆ ಒಳ್ಳೆಯದು’ ಎಂದು ಹೇಳುತ್ತಾ ಇರುವುದನ್ನು ನಾವು ಪ್ರತಿದಿನ ಕೇಳುತ್ತಿರುತ್ತೇವೆ.
ಹಾಗೆ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಮಗೆ ನಮ್ಮ ಮನೆಯಲ್ಲಿನ ಹಿರಿಯರು ಹೇಳಿದರೂ ಸಹ ನಾವು ಅದನ್ನು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಏನೋ ಹಿರಿಯರು ಹೇಳುತ್ತಿದ್ದಾರೆ ಎಂದು ನಾವು ಒಂದೆರಡು ದಿನ ಅದನ್ನು ಪಾಲಿಸಿದರೂ ಮೂರನೆಯ ದಿನ ಹಾಗೆ ಹಾಸಿಗೆಯಿಂದ ಎದ್ದು ಅವಸರದಲ್ಲಿ ಬಾತ್‌ರೂಮ್ ಗೆ ಹೋಗಿ ಬಡಬಡನೆ ಹಲ್ಲುಜ್ಜಿಕೊಂಡು ಬಿಡುತ್ತೇವೆ. ಆನಂತರ ‘ಅರೇ ಹಲ್ಲುಜ್ಜುವ ಮೊದಲು ನೀರು ಕುಡಿಯುವುದನ್ನೇ ಮರೆತುಬಿಟ್ಟೆ’ ಎಂದು ಹೇಳುವುದುಂಟು.
ಕೆಲವರಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಕುಡಿಯಲು ಚಹಾ ಅಥವಾ ಟೀ ಬೇಕೇ ಬೇಕು, ಇಲ್ಲದಿದ್ದರೆ ಅವರಿಗೆ ಬೆಳಗ್ಗೆ ಎದ್ದ ಹಾಗೆ ಆಗುವುದಿಲ್ಲ. ಆದರೂ ಈ ಹಲ್ಲುಜ್ಜುವುದು ಅತ್ಯಂತ ಪ್ರಮುಖ ಮೂಲಭೂತ ನೈರ್ಮಲ್ಯ ಅಭ್ಯಾಸಗಳಲ್ಲಿ ಒಂದಾಗಿದೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಎಂದರೆ ಬೆಳಗ್ಗೆ ಹಾಸಿಗೆಯಿಂದ ಎದ್ದ ನಂತರ ಒಮ್ಮೆ ಮತ್ತು ರಾತ್ರಿ ಮಲಗುವ ಮೊದಲು ಇನ್ನೊಮ್ಮೆ ಹಲ್ಲುಜ್ಜಲು ತಜ್ಞರು ಶಿಫಾರಸು ಮಾಡುತ್ತಾರೆ. ಬೆಳಗ್ಗೆ ಹಲ್ಲುಜ್ಜುವ ಮೊದಲು ನಾವು ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು ಎಂದು ಸಾಮಾನ್ಯವಾಗಿ ನಂಬಲಾಗಿದೆ.
ಆದಾಗ್ಯೂ, ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು.. ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.
ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು:
1. ದೇಹದ ಜೀರ್ಣಾಂಗ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ
ಖಾಲಿ ಹೊಟ್ಟೆಯಲ್ಲಿ ಮತ್ತು ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಬೆಳಗ್ಗೆ ಬ್ರಷ್ ಮಾಡದೆ ನೀರು ಕುಡಿಯುವುದರಿಂದ ಈ ಅಭ್ಯಾಸ ದೇಹದ ಜೀರ್ಣಾಂಗ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದಲ್ಲದೆ, ಬೆಳಗ್ಗೆ ಬ್ರಷ್ ಮಾಡದೆ ನೀರು ಕುಡಿಯುವುದರಿಂದ ದೇಹದಿಂದ ಅನೇಕ ರೀತಿಯ ರೋಗಗಳನ್ನು ತೊಡೆದು ಹಾಕುತ್ತದೆ ಎಂದು ಹೇಳಬಹುದು.
2. ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಇನ್ನೊಂದು ಮುಖ್ಯವಾದ ಆರೋಗ್ಯ ಪ್ರಯೋಜನವೆಂದರೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರ ಮತ್ತು ನಿಮ್ಮ ದೇಹದ ಚರ್ಮವನ್ನು ಹೊಳೆಯುವಂತೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
3. ಅತಿಯಾದ ಬೊಜ್ಜು ಕರಗಿಸುತ್ತದೆ
ಇಷ್ಟೇ ಅಲ್ಲದೆ ನಿಮ್ಮ ದೇಹದಲ್ಲಿರುವ ಅತಿಯಾದ ಬೊಜ್ಜು, ಮಲಬದ್ಧತೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ರೋಗಗಳಿಗೂ ಇದು ಒಳ್ಳೆಯದು. ಈ ಎಲ್ಲಾ ಕಾಯಿಲೆಗಳಿಂದ ಬಳಲುತ್ತಿರುವ ಜನರು ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
4. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಶೇಖರಣೆಯನ್ನು ತಡೆಯುತ್ತದೆ
ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಶೇಖರಣೆಯನ್ನು ತಡೆಯುತ್ತದೆ, ಇದು ಕುಳಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನಿಮ್ಮ ಬಾಯಿಯಿಂದ ಬರುವ ದುರ್ವಾಸನೆಯನ್ನು ದೂರ ಮಾಡಲು ಸಹ ಇದು ಸಹಾಯ ಮಾಡುತ್ತದೆ.
5. ಕೆಟ್ಟ ಉಸಿರಾಟದ ಸಮಸ್ಯೆಯನ್ನು ತೊಡೆದು ಹಾಕಬಹುದು
ನಾವು ರಾತ್ರಿ ಹೊತ್ತು ಮಲಗಿದ್ದಾಗ ಬಾಯಿಯಲ್ಲಿ ಲಾಲಾರಸದ ಕೊರತೆಯಿಂದಾಗಿ, ನಮ್ಮ ಬಾಯಿ ಸಂಪೂರ್ಣವಾಗಿ ಒಣಗಿರುತ್ತದೆ ಮತ್ತು ಇದು ಕೆಲವೊಮ್ಮೆ ಹ್ಯಾಲಿಟೋಸಿಸ್ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಬಹುದು. ಆದ್ದರಿಂದ, ನೀವು ಬೆಳಿಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿದರೆ, ನೀವು ಕೆಟ್ಟ ಉಸಿರಾಟದ ಸಮಸ್ಯೆಯನ್ನು ತೊಡೆದು ಹಾಕಬಹುದು.