ಡೈಲಿ ವಾರ್ತೆ: 26/ಮೇ /2024
ಕೋಟ ಜಾಮಿಯಾ ಮಸ್ಜಿದ್ ವತಿಯಿಂದ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡದವರ ಹೊಸ ಮನೆ ನಿರ್ಮಾಣಕ್ಕೆ 25 ಸಾವಿರ ರೂ. ದೇಣಿಗೆ
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಸಮುದಾಯದವರಿಗೆ 8 ಹೊಸ ಮನೆ ನಿರ್ಮಾಣವಾಗುತ್ತಿದ್ದು. ಕೋಟ ಜಾಮಿಯಾ ಮಸ್ಜಿದ್ ವತಿಯಿಂದ 25 ಸಾವಿರ ರೂ. ಚೆಕ್ ನ್ನು ಶನಿವಾರ ಕಟ್ಟಡ ಸಮಿತಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೋಟ ಜಾಮಿಯ ಮಸ್ಜಿದ್ ಅಧ್ಯಕ್ಷರು, ನಿವೃತ್ತ ತಹಸಿಲ್ದಾರರಾದ ಕೆಎಂ ಸಲೀಂ ಮಾತನಾಡಿ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಸಮುದಾಯದವರು ಮುಗ್ದರು ಅಲ್ಲದೆ ಅದೃಷ್ಟವಂತರು ಕೂಡ ಹೌದು. ಕಾರಣ
ಪರಿಶಿಷ್ಟ ಪಂಗಡ ಸಮುದಾಯದವರು ಎಲ್ಲರ ಹಾಗೆ ಒಂದು ಸುಸಜ್ಜಿತ ಮನೆಯಲ್ಲಿ ವಾಸಿಸಬೇಕೆಂದು ಕೋಟತಟ್ಟು ಪಂಚಾಯಿತಿನವರು ಸಂಕಲ್ಪ ಮಾಡಿ ಸುಸಜ್ಜಿತವಾದ ಎಂಟು ಹೊಸ ಮನೆ ನಿರ್ಮಾಣ ಮಾಡಲು ಹೊರಟ ಪಂಚಾಯತ್ ಅಧ್ಯಕ್ಷರು ಸರ್ವ ಸದಸ್ಯರಿಗೂ ಹಾಗೂ ಪಂಚಾಯತ್ ಅಧಿಕಾರಿಗಳಿಗೆ ನಮ್ಮಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತವೆ ಎಂದರು. ಅಲ್ಲದೆ ನಮ್ಮ ಮಸ್ಜಿದ್ ಸಮಿತಿಯ ಸದಸ್ಯರೆಲ್ಲರೂ ತುಂಬು ಸಂತೋಷದಿಂದ ಈ ಹಣವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಹಕಾರವನ್ನು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಶ್ರೀಮತಿ ಸರಸ್ವತಿ, ಸದಸ್ಯರು ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕೋಟ ಜಾಮಿಯಾ ಮಸ್ಜಿದ್ ಕಾರ್ಯದರ್ಶಿ ಬಶೀರ್, ಉಪಾಧ್ಯಕ್ಷ ವಾಹಿದ್ ಆಲಿ ಎಂ., ಕೋಶಾಧಿಕಾರಿ ಕೆ. ಅಬ್ದುಲ್ ಬಸಿರ್, ಸದಸ್ಯರು ಅಬ್ದುಲ್ ಸಿರಾಜ್ ಬಾರಿಕೆರೆ ಹಾಗೂ ಚಿಟ್ಟಿಬೆಟ್ಟು ಫಲಾನುಭವಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.