ಡೈಲಿ ವಾರ್ತೆ: 31/ಮೇ /2024
ವರದಿ: ಶಿವಾನಂದಸ್ವಾಮಿ ಆರ್. ದೊರೆ.
ಯಾದಗಿರಿ: ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರ – ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಸದುಪಯೋಗ ಪಡಿಸಿಕೊಳ್ಳಿ: ಡಾ. ಆರ್.ವಿ.ನಾಯಕ
ಸುರಪುರ:ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂದಿನ ತಿಂಗಳು ಜೂನ್ 8, 9 ರಂದು ಎರಡು ದಿನಗಳವರೆಗೆ ಉಚಿತ ನೇತ್ರ ಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೋಳ್ಳಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಅವರು ಮನವಿ ಮಾಡಿದರು.
ನಗರದ ತಾಲೂಕು ಆರೋಗ್ಯ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಯಾದಗಿರಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಕುಟುಂಬ ಕಲ್ಲಾಣ ಇಲಾಖೆ ಜಿಲ್ಲಾ ಅಂದತ್ವ ನಿಯಂತ್ರಣ ವಿಭಾಗ ಹಾಗೂ ಸೇರಲು ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಜನಹಿತ ಐಕೇರ್ ಹಾಗೂ ಹಿಂದುಪುರದ ಡಾ.ಕ್ರಿಷ್ಣಮೊಹನ ಜಿಂಕಾ ತಂಡ ಅವರು ಸುಮಾರು 350 ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಶಸ್ತ್ರ ಚಿಕಿತ್ಸೆ ಮೊದಲು ಬಿಪಿ, ಶುಗರ್, ರಕ್ತ ಪರೀಕ್ಷೆ ಮಾಡಲಾಗುವುದು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಲ್ಲುವವರ ಜೊತೆ ಅವರ ಯಾರಾದರೂ ಸಂಬಂಧಿಕರು ಒಬ್ಬರೇ ಬರಬೇಕೇ ಹೊರತು ಅವರ ಜೊತೆ ಮತ್ತೋಬ್ನರು ಬರುವುದು ಬೇಡ ಎಕೆಂದರೆ ಆಸ್ಪತ್ರೆಯಲ್ಲಿ ಅನಾವಶ್ಯಕವಾಗಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತೊಂದರೆಯಾಗುತ್ತದೆ. ಫಲಾನುಭವಿಗಳಿಗೆ ನೋಡಿಕೋಳ್ಳಲು ನಮ್ಮ ಸಿಬ್ಬಂದಿಯವರು ಇರುತ್ತಾರೆ ಯಾವುದೇ ಆತಂಕ ಬೇಡ ಎಂದರು.
ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರು ಬರುವಾಗ ತಮ್ಮ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾಡ್೯, ಝರಾಕ್ಸ್ ಪ್ರತಿಗಳನ್ನು ತಪ್ಪದೇ ತರಬೇಕು. ಅಲ್ಲದೇ ಆಧಾರ ಕಾಡ್೯ ಝರಾಕ್ಸ್ ಪ್ರತಿ ಮೇಲೆ ಕಡ್ಡಾವಾಗಿ ತಮ್ಮ ದೂರವಾಣಿ ಸಂಖ್ಯೆಯನ್ನು ದಪ್ಪ ಅಕ್ಷರದಲ್ಲಿ ಬರೆಯಬೇಕು ಹಾಗೂ ಸೇವಿಂಗ್, ಕಟಿಂಗ್ ಹಾಗೂ ಶುಭ್ರವಾಗಿ ಸ್ನಾನ ಮಾಡಿಕೊಂಡು ಶುಭ್ರವಾದ ಬಟ್ಟೆಗಳನ್ಮು ಧರಿಸಿಕೊಂಡು ಬರಬೇಕು. ಝರಾಕ್ಸ್ ಪ್ರತಿಗಳನ್ನು ತಪ್ಪದೇ ತರಬೇಕು. ಅಲ್ಲದೇ ಆಧಾರ್ ಕಾಡ್೯ಹಾಗೂ ತಪ್ಪದೇ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾಡ್೯ ಮೇಲೆ ಕಡ್ಡಾವಾಗಿ ತಮ್ಮ ದೂರವಾಣಿ ಸಂಖ್ಯೆಯನ್ನು ದಪ್ಪ ಅಕ್ಷರದಲ್ಲಿ ಬರೆಯಬೇಕು ಎಂದರು.
ಶಸ್ತ್ರ ಚಿಕಿತ್ಸೆ ಫಲಾನುಭವಿಗಳಿಗೆ ನಗರದ ಲಯನ್ಸ್ ಕ್ಲಬ್ ನವರು ಎರಡು ದಿನಗಳವರೆಗೆ ಉಪಾಹಾರ, ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತಾರೆ.
ಕಳೆದ 2023ರಲ್ಲಿ ಸುಮಾರು 362 ಫಲಾನುಭವಿಗಳು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ವರ್ಷ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಸುರಪುರ – ಹುಣಸಗಿ ತಾಲೂಕಿನ ದೀನ ದಲಿತರು, ಬಡವರು ಯಾರಾದರೂ ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಿದ್ದರೆ ಸ್ಥಳೀಯ ಜನಪತಿನಿಧಿಗಳು, ಸಂಘ ಸಂಸ್ಥೆಯವರು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಈ ಶಿಬಿರದ ಕುರಿತು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಲ್ಲಿ ತಿಳಿ ಹೇಳಿ ಪ್ರಚಾರ ಮಾಡಿ ಯಶಸ್ವಿಯಾಗಲು ಸಹಕರಿಸಬೇಕು ಎಂದು ಡಾ. ಆರ್.ವಿ.ನಾಯಕ ಹೇಳಿದರು.