ಡೈಲಿ ವಾರ್ತೆ: 03/ಜೂ./2024

ಮದರ್ ಡೈರಿ: ಇಂದಿನಿಂದ ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಳ!

ನವದೆಹಲಿ: ಅಮುಲ್‌ ಹಾಲಿನ ದರ ಏರಿಕೆ ಬೆನ್ನಲ್ಲೇ ಮದರ್ ಡೈರಿ ಸಹ ಹಸು ಹಾಗೂ ಎಮ್ಮೆ ಹಾಲು ಸೇರಿದಂತೆ ವಿವಿಧ ಮಾದರಿಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ.

ಜೂನ್‌ 3ರಿಂದಲೇ (ಇಂದು) ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಕ್ತ ವರ್ಷದಲ್ಲಿ ಇದು ಮೊದಲ ಬಾರಿಗೆ ಬೆಲೆ ಏರಿಕೆಯಾಗಿದೆ.
ಯಾವ ಮಾದರಿಯ ಹಾಲಿಗೆ ಎಷ್ಟು ಬೆಲೆ ಏರಿಕೆ?
ಟೋಕನ್‌ ಮಿಲ್ಕ್‌ 52 ರೂ. ನಿಂದ 54 ರೂ.ಗೆ ಹೆಚ್ಚಿಸಲಾಗಿದೆ. ಇನ್ನುಳಿದಂತೆ ಟೋನ್ಡ್‌ ಮಿಲ್ಕ್‌ (ಟೆಟ್ರಾ ಪ್ಯಾಕ್‌) 54 ರೂ. ನಿಂದ 56 ರೂ.ಗೆ, ಹಸುವಿನ ಹಾಲು 56 ರಿಂದ 58 ರೂ.ಗೆ, ಕೆನೆ ಹಾಲು 66 ರೂ. ನಿಂದ 68 ರೂ.ಗೆ. ಎಮ್ಮೆ ಹಾಲು 70 ರೂ. ನಿಂದ 72 ರೂ. ಹಾಗೂ ಡಬಲ್‌ ಟೋನ್ಡ್‌ ಪ್ಯಾಕೆಟ್‌ ಹಾಲಿನ ದರ 48 ರೂ. ನಿಂದ 50 ರೂ.ಗಳಿಗೆ ಹೆಚ್ಚಿಸಲಾಗಿದೆ.