ಡೈಲಿ ವಾರ್ತೆ: 04/ಜೂ./2024

ಬ್ರಹ್ಮಾವರ: ಕುಖ್ಯಾತ ಅಂತರ್ ಜಿಲ್ಲಾ ಮನೆ ಕಳ್ಳರ ಬಂಧನ – ಬೈಕ್, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು ವಶಕ್ಕೆ

ಬ್ರಹ್ಮಾವರ:ಬ್ರಹ್ಮಾವರ ಪೊಲೀಸರು ಕಾರ್ಯಾಚರಣೆ ನಡೆಸಿ  ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ಲಕ್ಷ್ಮೇಶ್ವರ ಶಿರಹಟ್ಟಿ ತಾಲ್ಲೂಕಿನ ಹನುಮಂತ ತೋಲ್ಯಪ್ಪ ಕುಂಚಿಕೊರವರ(24), ಹುಬ್ಬಳ್ಳಿಯ ಮಲ್ಲಿಕಾರ್ಜುನ ಮೋಹನ ಕೊರವರ(26), ರಾಯಬಾಗ್ ನ ಗಂಗಪ್ಪ ಯಲ್ಲಪ್ಪ ಮುಳಗುಂದ (33) ಎಂದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಡಾ.ಅರುಣ್ ಕೆ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಟಿ. ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಂತೆ ಶ್ರೀ ಪ್ರಭು ಡಿ.ಟಿ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ, ಉಡುಪಿ ಅವರ ನಿರ್ದೇಶನದಂತೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಈಶ್ವರ ನಗರ, ಹೇರಂಜೆ ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿನ ಮನೆ ಕಳ್ಳತನ ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರ ಆರೋಪಿಗಳನ್ನು ಬಂಧಿಸಿ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೈಕನ್ನು ವಶಪಡಿಸಿಕೊಂಡಿದ್ದಾರೆ.


ಈ ಕಾರ್ಯಾಚರಣೆಯಲ್ಲಿ ಶ್ರೀ ದಿವಾಕರ ಪಿ.ಎಂ ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ ಪಿಎಸ್ಐ ಮಧು ಬಿ.ಇ., ಹಿರಿಯಡ್ಕ ಠಾಣಾ ಪಿಎಸ್ಐ ಮಂಜುನಾಥ ಮರಬದ, ಠಾಣಾ ಪಿಎಸ್ಐ ತನಿಖಾ ಪಿಎಸ್ಐ ರತ್ನ ಕುಮಾರ ಎಂ, ಬ್ರಹ್ಮಾವರ  ವೃತ್ತ ಕಛೇರಿ ಎಎಸ್‌ಐ ಕೃಷ್ಣಪ್ಪ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ವೆಂಕಟ್ರಮಣ ದೇವಾಡಿಗ ಪ್ರವೀಣ ಶೆಟ್ಟಿಗಾರ್, ಮಹಮ್ಮದ್ ಅಜ್ಮಲ್ ಹೈಕಾಡಿ, ದಿಲೀಪ್ ಕುಮಾರ ಕೋಟ,  ಠಾಣಾ ಸಿಬ್ಬಂದಿ ರಾಘವೇಂದ್ರ ಶೆಟ್ಟಿ,  ಹಿರಿಯಡ್ಕ ಠಾಣಾ ಸಿಬ್ಬಂದಿ ಕಾರ್ತಿಕ್ ಹಾಗೂ ಜಿಲ್ಲಾ ಸಿಡಿಆರ್ ವಿಭಾಗದ ದಿನೇಶ, ನಿತೀನ್ ಪಾಲ್ಗೊಂಡಿದ್ದರು.