ಡೈಲಿ ವಾರ್ತೆ: 05/ಜೂ./2024

ತುಂಬೆ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಂಟ್ವಾಳ : ತುಂಬೆ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಬುಧವಾರ ಆಚರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧೀಕ್ಷಕ ಅಬ್ದುಲ್ ಕಬೀರ್ ಅವರು ಮಾತನಾಡಿ,   
ಇಂದಿನ ದಿನದಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಪರಿಸರ ಇದ್ದರೆ ನಾವು ಎಂಬ ಪರಮ ಸತ್ಯವನ್ನು ತಿಳಿಯುವುದು ಅನಿವಾರ್ಯವಾಗಿದೆ. ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ಶುದ್ಧ ಪರಿಸರ ಅತ್ಯಗತ್ಯ. ಮನೆಯ ಮಗುವನ್ನು ರಕ್ಷಿಸುವ ಹಾಗೆ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ಅರಿಯೋಣ ಎಂದರು.

      ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಬಂಧುಗಳು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

     ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ  ವಿದ್ಯಾ ಕೆ. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ,  ಶಿಕ್ಷಕರಾದ ರೇಖಾ ಎನ್, ದೇವದಾಸ್ ಕೆ.ಕೆ,  ಮೋಲಿ ಎಡ್ನಾ,  ಸುಕೇತ, ರಮೇಶ್,  ಶಿಕ್ಷಕೇತರ ಸಿಬ್ಬಂದಿಗಳಾದ  ಅಶೋಕ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು