ಡೈಲಿ ವಾರ್ತೆ: 08/ಜೂ./2024
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಬಿದ್ಕಲ್ ಕಟ್ಟೆ ಪ್ರಧಾನ ಕಚೇರಿಯ ನೂತನ ಕಟ್ಟಡ “ಸಹಕಾರ ಸಾನಿಧ್ಯ” ಲೋಕಾರ್ಪಣೆ
ಕುಂದಾಪುರ: ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಬಿದ್ಕಲ್ ಕಟ್ಟೆ ಪ್ರಧಾನ ಕಚೇರಿಯ ನೂತನ ಕಟ್ಟಡ “ಸಹಕಾರ ಸಾನಿಧ್ಯ” ಜೂ. 8 ರಂದು ಶನಿವಾರ ಬಿದ್ಕಲ್ ಕಟ್ಟೆಯಲ್ಲಿ ಲೋಕಾರ್ಪಣೆ ಗೊಂಡಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಶುಭ ಹಾರೈಸಿ ಮಾತನಾಡಿದ ಅವರು, ರೈತರಿಗೆ ಎಲ್ಲಾ ಸವಲತ್ತುಗಳನ್ನು ನೀಡುವ ಒಂದು ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ ಮಾತ್ರ. ಸಹಕಾರಿ ಕ್ಷೇತ್ರ ಎಂದರೆ ಒಂದು ಕಲ್ಪವೃಕ್ಷ ಇದ್ದ ಹಾಗೆ. ಜನರ ಕಷ್ಟ, ಸುಖ ಎಲ್ಲದಕ್ಕೂ ಸಹಕಾರಿ ಸಂಸ್ಥೆ ಸ್ಪಂದಿಸುತ್ತದೆ.
ಆದರೆ ಸರಕಾರ ಒಂದು ರೂಪಾಯಿ ಠೇವಣಾತಿಯನ್ನು ನಮ್ಮ ಸಹಕಾರಿ ಸಂಸ್ಥೆಯಲ್ಲಿ ಇಡುವುದಿಲ್ಲ.
ಸರಕಾರವು ಸಹಕಾರಿ ಕ್ಷೇತ್ರಗಳಲ್ಲಿಯೂ ಠೇವಣಿ ಇಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಈಗಾಗಲೇ ಸಹಕಾರಿ ಕ್ಷೇತ್ರದಲ್ಲಿ ನೀಡುವ ನಿಬಡ್ಡಿ ಸಾಲ ಹಾಗೂ 3% ಸಾಲದಿಂದಾಗಿ 1.5% ರಷ್ಟು ಮೊತ್ತವನ್ನು ಕೈಯಿಂದ ಕಳೆದುಕೊಳ್ಳುತ್ತಿದ್ದೇವೆ.
ಸರಕಾರಕ್ಕೆ ಸೇವೆ ಮಾಡೋಕೆ ನಾವು ಬೇಕು, ಹಣ ಇಡಲು ಚೆಕ್ ಇಲ್ಲದೆ ವ್ಯವರಿಸುವ ಬ್ಯಾಂಕ್ ಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ವಾಣಿಜ್ಯ ಬ್ಯಾಂಕ್ ಗಳಲ್ಲಿ ನೌಕರರಾಗಿ ಭಾಷೆ ಬಾರದವರು ಇದ್ದಾರೆ. ಅದೇ ನಮ್ಮ ಸಹಕಾರಿ ಬ್ಯಾಂಕ್ ಗಳಲ್ಲಿ ನಮ್ಮ ಸೇವೆ ಮಾಡುವ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಬರುವ ನೌಕರರು ಇದ್ದಾರೆ ಎಂದರು.
‘ಸಾನಿಧ್ಯ‘ ಅಂದರೆ ದೇವರ ಸ್ಥಳ. ನಾವು ಅಲ್ಲಿ ಹೋಗಿ ಬೇಡಿಕೆ ಈಡೇರಿಸಲು ಬೇಡಿಕೊಳ್ಳುತ್ತೇವೆ.
ಇಂದು ಮೊಳಹಳ್ಳಿ ಶಿವರಾವ್ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ‘ಸಾನಿಧ್ಯ‘ ಅಂತ ಹೆಸರನ್ನು ಇಟ್ಟಿದ್ದಾರೆ. ಅದರಂತೆ ಈ ಮೊಳಹಳ್ಳಿ ವ್ಯವಸಾಯ ಸಂಘಕ್ಕೆ ಹೋದಾಗ ನಿಮ್ಮೆಲ್ಲರ ಬೇಡಿಕೆ ನೆರೆವೇರಿಸುವಂಥ ಶಕ್ತಿ ಈ ಸಂಘಕ್ಕೆ ಬರಲಿ ಎಂದು ಹಾರೈಸಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ
ಮೊಳಹಳ್ಳಿ ಶಿವರಾವ್ ಸಭಾಂಗಣವನ್ನು ಉದ್ಘಾಟಿಸಿ, ಈ ಸಹಕಾರಿ ಸಂಘಗಳು ರೈತರಿಗೆ ಬೇಕಾದ ಸಾಲ ಸೌಲಭ್ಯವನ್ನು ಒದಗಿಸಿ ಕೊಡುವ ಒಂದು ವ್ಯವಸ್ಥೆಯಾಗಿವೆ.
ರೈತರಿಗೆ ಈಗಾಗಲೇ ಜಮೀನಿನ ಆಧಾರದ ಮೇಲೆ ಅವರ ಬೆಳೆಗಳ ಆಧಾರದ ಮೇಲೆ 3ಲಕ್ಷ ರೂ.ಬಡ್ಡಿ ದರ ಸಾಲವನ್ನು ಸಹಕಾರಿ ಸಂಸ್ಥೆ ನೀಡುತ್ತಾ ಬಂದಿದೆ.
ಮುಂದಿನ ದಿನಗಳಲ್ಲಿ ಸರಕಾರದಿಂದ 5 ಲಕ್ಷ ನಿಬಡ್ಡಿ ಸಾಲವನ್ನು ರೈತರಿಗೆ ನೀಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು. ಅಲ್ಲದೆ ನಿಬಡ್ಡಿ ಸಾಲ 3 ಲಕ್ಷದಿಂದ 5 ಲಕ್ಷ ಕೊಡಬೇಕು. 3 ಲಕ್ಷದ ಬಡ್ಡಿ ದರ ಸಾಲವನ್ನು 10 ಲಕ್ಷದಿಂದ 15 ಲಕ್ಷ ವರೆಗೆ ನೀಡಬೇಕೆಂದು ಶಾಸಕರು ಕೇಳಿಕೊಂಡರು.
ರಾಜ್ಯ ವಿಧಾನ ಪರಿಷತ್ ನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಶಾಖೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿಯವರು ನವೀಕೃತ ಶಿವರಾವ್ ಪ್ರತಿಮೆ ಅನಾವರಣಗೊಳಿಸಿದರು.
ಗೋದಾಮು ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್. ಉದ್ಘಾಟಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಎಮ್. ಮಹೇಶ್ ಹೆಗ್ಡೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜು ಪೂಜಾರಿ, ಅರುಣ್ ಕುಮಾರ್ ಎಸ್. ವಿ., ಮಲ್ಯಾಡಿ ಶಿವರಾಮ್ ಶೆಟ್ಟಿ, ಎಚ್. ಹರಿಪ್ರಸಾದ್ ಶೆಟ್ಟಿ, ಎಮ್. ದಿನೇಶ್ ಹೆಗ್ಡೆ, ಎಮ್. ಚಂದ್ರಶೇಖರ್ ಶೆಟ್ಟಿ, ಜಯಂತಿ ಶೆಟ್ಟಿ, ದೀಪಾ ಆರ್. ಶೆಟ್ಟಿ,
ಸಿ. ಜಗನ್ನಾಥ್ ಶೆಟ್ಟಿ ಪಾರ್ವತಿ ಎಮ್. ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.