ಡೈಲಿ ವಾರ್ತೆ: 11/ಜೂ./2024
ಹೊನ್ನಾಳ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ
ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ತ್ ಹೊನ್ನಾಳ ಶಾಖೆ ನೇತೃತ್ವದಲ್ಲಿ
ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ (S S F) ಹೊನ್ನಾಳ ಘಟಕದ ವತಿಯಿಂದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳ ಇದರ ವಿದ್ಯಾರ್ಥಿಗಳಿಗೆ ಸತತ 17 ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ವಿದ್ಯೆಯನ್ನು ಕಲಿತು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೋಡಗಿಸಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಮಾತ್ರ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಮತ್ತು ವಿದ್ಯೆ ಕಲಿಸಿದ ಗುರುಗಳ ಶ್ರಮಕ್ಕೂ ದಾನಿಗಳು ನೀಡಿದ ನೆರವಿಗೆ ಬೆಲೆ ಬರಲೂ ಸಾಧ್ಯ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ತ್ ಹೊನ್ನಾಳ ಶಾಖೆಯ ನೇತೃತ್ವದಲ್ಲಿ ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಘಟಕದ ವತಿಯಿಂದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳ ಇದರ ಮಕ್ಕಳಿಗೆ ಸತತ 17ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ H. ಸುಭಾನ್ ಅಹ್ಮದ್ ಹೊನ್ನಾಳ ಹೇಳಿದರು. ಅವರು ಜೂ. 11 ರಂದು ಮಂಗಳವಾರ ಮದ್ಯಾಹ್ನ 2.30 ಕ್ಕೆ ಶಾಲಾ ಆವರಣದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಅವರು ಮಾತನಾಡಿದರು.
ಜಾಮಿಯ ಮಸೀದಿ ಹೊನ್ನಾಳ ಇದರ ಅಧ್ಯಕ್ಷರಾದ ಬಿ. ಮುಹಮ್ಮದ್ ರಫೀಕ್, ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಸುರೇಶ್ ಪೂಜಾರಿ ಹೊನ್ನಾಳ, ಉರ್ದು ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಟೀಚರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್ ಗೌಸ್, ಜಾಮಿಯ ಮಸೀದಿ ಹೊನ್ನಾಳ ಇದರ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಸುಭಾನ್ ಅಹ್ಮದ್, ಕಾರ್ಯದರ್ಶಿ ಝಿಯಾವುಲ್ಲಾ ಮುಸ್ಲಿಂ ಜಮಾಅತ್ತ್ ಕಾರ್ಯದರ್ಶಿ ಮುಝಮ್ಮಿಲ್,
ಎಸ್. ಎಸ್. ಎಫ್ ಕಾರ್ಯದರ್ಶಿಗಳಾದ ಬಿ. ಎಸ್. ಸೆಹರಾನ್, ಮೊಹಮ್ಮದ್ ಸೈರಾಜ್, ಮೊಹಮ್ಮದ್ ಅರ್ಮಾನ್, ಚೌ. ರಿಯಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಮಮತಾ ಟೀಚರ್, ಶಾಹಿದಾ ಟೀಚರ್, ಮಾಲತಿ ಟೀಚರ್, ಶ್ವೇತಾ ಟೀಚರ್, ಆಫಿಯಾ ಟೀಚರ್, ಅಶ್ಮೀತಾ ಟೀಚರ್
ಶಾಲಾ ಹಳೆ ವಿದ್ಯಾರ್ಥಿಗಳು. ಶಾಲಾ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.
ಎಸ್. ಎಸ್. ಎಫ್. ನಾಯಕ ಮುಹಮ್ಮದ್ ಇಮ್ತಿಯಾಝ್ ಹೊನ್ನಾಳ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಹೊನ್ನಾಳದ ವತಿಯಿಂದ ನೆರದವರಿಗೆಲ್ಲಾ ಸಿಹಿತಿಂಡಿ ವಿತರಿಸಲಾಯಿತು.