ಡೈಲಿ ವಾರ್ತೆ: 22/ಜೂ./2024

ಕಡೇಶ್ವಾಲ್ಯ: ಕೆಮ್ಮಾನ್ ನಿವಾಸಿ ರಫೀಕ್ ನಿಧನ

ಬಂಟ್ವಾಳ : ಕಡೇಶ್ವಾಲ್ಯ ಸಮೀಪದ ಕೆಮ್ಮಾನ್ ನಿವಾಸಿ ರಫೀಕ್( 55) ಅವರು ಹೃದಯ ಸಂಬಂಧಿಸಿದ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನರಾದರು.

 ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನರಾದರು.

ಮೃತರು ಪತ್ನಿ, ಐವರು ಗಂಡು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.