ಡೈಲಿ ವಾರ್ತೆ: 23/ಜೂ./2024

🖊️ ವರದಿ: ಸುರೇಂದ್ರ ಕಾಂಚನ್ ಸಂಗಮ್

ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ವತಿಯಿಂದ ಜನಸಂಘದ ಸಂಸ್ಥಾಪಕರಾದ
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸಂಸ್ಮರಣೆ

ಕುಂದಾಪುರ: ಜನಸಂಘದ ಸಂಸ್ಥಾಪಕರಾದ
ಡಾ! ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸಂಸ್ಮರಣೆ. ಕಾರ್ಯಕ್ರಮವು ಇಂದು ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ಕಚೇರಿಯಲ್ಲಿ ನೆರವೇರಿತು.

ಬಿಜೆಪಿ ಕುಂದಾಪುರ ಕ್ಷೇತ್ರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿಯವರು* ಡಾ!! ಶ್ಯಾಮ್ ಪ್ರಸಾದ್ ಮುಖರ್ಜಿ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಾ ಶ್ಯಾಮ ಪ್ರಸಾದ್‌ ಮುಖರ್ಜಿ ಎಂದೊಡನೆ ಬಹುತೇಕ ಜನಸಾಮಾನ್ಯರಿಗೆ ನೆನಪಾಗುವುದು ಅವರಿಂದ ಸ್ಥಾಪಿತವಾದ ಭಾರತೀಯ ಜನಸಂಘ ಎನ್ನುವ ಪಕ್ಷ ಮತ್ತು ಆ ಮೂಲಕ ಇದೀಗ ಪ್ರಪಂಚದ ಅತೀ ದೊಡ್ಡ ಮತ್ತು ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವೆನ್ನುವ ಹೆಗ್ಗಳಿಕೆ ಅವರ ಸಾರ್ಥಕ ಹೋರಾಟಗಳನ್ನು ನೆನಪು ಮಾಡಿಕೊಳ್ಳುತ್ತಾ “ಮುಖರ್ಜಿ ಅವರ ಉದಾತ್ತ ಪರಿಕಲ್ಪನೆಗಳು, ಶ್ರೀಮಂತ ವಿಚಾರಧಾರೆಗಳು, ಜನಸಾಮಾನ್ಯರಿಗೆ ಸೇವೆ ಮಾಡುವ ಅವರ ಬದ್ಧತೆಗಳು ನಮ್ಮೆಲ್ಲರಿಗೂ ಸದಾ ಕಾಲವು ಸ್ಫೂರ್ತಿದಾಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್.ಕೆ.ಎಸ್, ಉಪಾಧ್ಯಕ್ಷರಾದ ಸುನೀಲ್ ಶೆಟ್ಟಿ ಹೇರಿಕುದ್ರು, ಶ್ರೀಮತಿ ರೂಪಾ ಬಾಬು ಪೈ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಸೌರಭಿ ಪೈ, ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಭಾಕರ್ ವಿ, ಶ್ರೀಮತಿ ವನಿತಾ ಬಿಲ್ಲವ, ಮಾಜಿ ಪುರಸಭಾ ಸದಸ್ಯರಾದ ಸತೀಶ್ ಶೆಟ್ಟಿ ರತ್ನಾಕರ ಶೇರಿಗಾರ್, ಪ್ರಕಾಶ್ ಖಾರ್ವಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಚೇತನ್ ಖಾರ್ವಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಪ್ರಶಾಂತ್ ಮೊಗವೀರ, ಹಾಗೂ ಭಾಸ್ಕರ್ ಶ್ರೀಯಾನ್, ಸರಸ್ವತಿ ಕುಂದಾಪುರ, ಗೀತಾ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.