ಡೈಲಿ ವಾರ್ತೆ: 25/ಜೂ./2024

ಮೆಲ್ಕಾರ್ ಪದವಿ ಕಾಲೇಜಿನಲ್ಲಿ ಉದ್ಯೋಗ ಘಟಕ ಸ್ಥಾಪನೆ

ಬಂಟ್ವಾಳ : ಮಾರ್ನಬೈಲು, ಮೆಲ್ಕಾರ್ ಪದವಿ ಕಾಲೇಜು ಇದರ ಅಧೀನದಲ್ಲಿ ಉದ್ಯೋಗ  ಘಟಕದ ಉದ್ಘಾಟನೆ ಇತ್ತೀಚೆಗೆ ನಡೆಯಿತು.  

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಫಯಾಜ್ ದೊಡ್ಡಮನೆ ಮಾತನಾಡಿ, ಇಂದು ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಒಂದಾಗಿದ್ದು, ವಿದ್ಯಾವಂತರಿಗೆ ಸರಕಾರಿ, ಅರೆ ಸರಕಾರಿ, ಖಾಸಗಿ ಉದ್ಯೋಗಗಳ ಕುರಿತು ಮಾಹಿತಿ ನೀಡಲು ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಕೌಶಲ್ಯ ಆಧಾರಿತವಾಗಿ ತಯಾರುಗೊಳಿಸಲು ಈ ಘಟಕವನ್ನು ಸ್ಥಾಪಿಸಲಾಗಿದೆ, ವಿದ್ಯಾವಂತ ಮಹಿಳೆಯರು ಉದ್ಯೋಗ ಪಡೆದು ಸ್ವಾವಲಂಬಿಯಾಗಲು ಈ ಘಟಕವು ಸಕ್ರಿಯವಾಗಿ  ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಘಟಕವನ್ನು ಕಾಲೇಜಿನ ಉಪ ಪ್ರಾಂಶುಪಾಲೆ ಸುನೀತ ಪಿರೇರಾ ಉದ್ಘಾಟಿಸಿದರು.

ಘಟಕದ ಸಂಯೋಜಕ ಅಬ್ದುಲ್ ಮಜೀದ್ ಎಸ್ ಸ್ವಾಗತಿಸಿ ಘಟಕದ ಉದ್ದೇಶಗಳನ್ನು ವಿವರಿಸಿದರು. ಉಪನ್ಯಾಸಕ ಎಂ.ಡಿ.ಮಂಚಿ ವಂದಿಸಿದರು.