ಡೈಲಿ ವಾರ್ತೆ: 25/ಜೂ./2024

ಶ್ರೀ ಲಕ್ಷ್ಮಿ ಚೆನ್ನಕೇಶವ ಮಕ್ಕಳ ಭಜನಾ ಮಂಡಳಿ ಮಾಣಿಕೊಳಲು ಸದಸ್ಯರಿಂದ ಮಂತ್ರಾಲಯದಲ್ಲಿ ಭಜನಾ ಕಾರ್ಯಕ್ರಮ

ಶ್ರೀ ಲಕ್ಷ್ಮಿ ಚೆನ್ನಕೇಶವ ಮಕ್ಕಳ ಭಜನಾ ಮಂಡಳಿ ಮಾಣಿಕೊಳಲು ಸದಸ್ಯರು ಭಾನುವಾರ ಬೆಳಿಗ್ಗೆ ಮಂಚಲಮ್ಮ ತಾಯಿ ದರ್ಶನ ಮಾಡಿ ನಂತರ ಮಂತ್ರಾಲಯ ಗುರುರಾಯರ ದರ್ಶನ ಮಾಡಿ ಕುಳಿತು ಭಜನಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ ಪಲ್ಲಕ್ಕಿ ಉತ್ಸವ ಇದ್ದು ಅದರಲ್ಲಿ ಆಕರ್ಷಣೆ ಯಾಗಿ ಕುಣಿತ ಭಜನಾ ಕಾರ್ಯಕ್ರಮ ನೆಡೆಸಿಕೊಟ್ಟು ಅಲ್ಲಿ ನೆರೆದ ಎಲ್ಲರ ಪ್ರಶಂಸೆಗು ಪಾತ್ರರಾದರು.

ಮಕ್ಕಳ ಕುಣಿತ ಭಜನೆ ನೋಡಿ ಪರಮ ಪೂಜ್ಯ ಮಂತ್ರಾಲಯ ಶ್ರೀ ಶ್ರೀ ಸುಭುದೇದ್ರ ಶ್ರೀಪಾದರು ಪುಟಾಣಿ ಮಕ್ಕಳನ್ನು ನೋಡಿ ಸಂತೋಷ ಗೊಂಡು ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಎಲ್ಲ ಪುಟಾಣಿ ಗಳಿಗೆ ಆಶೀರ್ವಾದ ಮಾಡಿ ಮಕ್ಕಳ ಕುಣಿತ ಭಜನೆ ನೋಡಿ ಸಂತೋಷ ಗೊಂಡು ಪುನಃ ಭಜನೆ ಕುಣಿಯಲು ತಿಳಿಸಿದರು.

ಗುರುಗಳು ಆಶೀರ್ವಾದ ಪಡೆದು ನಂತರ ಪಂಚಮುಖಿ ಶ್ರೀ ಆಂಜನೇಯ ದೇವಸ್ಥಾನ ಹಾಗೂ ಗುರುರಾಯರ ಮೂಲ ವೃoದವನ ಬಿಚ್ಚಾಲೆ ಇಲ್ಲಿ ದರ್ಶನ ಮಾಡಲಾಯಿತು.