ಡೈಲಿ ವಾರ್ತೆ: 27/ಜೂ./2024

ಉಡುಪಿ – ಮಲ್ಪೆ ಹೆದ್ದಾರಿ ರಸ್ತೆ ಮೇಲೆ ಬೃಹತ್‌ ಗಾತ್ರದ ಮರ ಉರುಳಿಬಿದ್ದು ಸಂಚಾರ ಅಸ್ತವ್ಯಸ್ತ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ಆದಿ ಉಡುಪಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದ ಪರಿಣಾಮ ಮಲ್ಪೆ ರಾ. ಹೆದ್ದಾರಿ ತಾತ್ಕಾಲಿಕ ‌ಬಂದ್ ಆಗಿರುತ್ತದೆ.

ಆದಿ‌ ಉಡುಪಿ ಪಂದುಬೆಟ್ಟು ಸಮೀಪ ಬೃಹತ್ ಮರ ಧರೆಗುರುಳಿದೆ ಪರಿಣಾಮ ಮಲ್ಪೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಳೆ, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬುಧವಾರ ತಡರಾತ್ರಿ, ಗುರುವಾರ ಮುಂಜಾನೆ ಗಾಳಿ‌ಸಹಿತ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಸಾಕಷ್ಟು ಹಾನಿ‌ ಸಂಭವಿಸಿದೆ.‌ ವಿಪರೀತ ಗಾಳಿ‌ ಮಳೆಯಿಂದಾಗಿ ತಡರಾತ್ರಿ ಪಂದುಬೆಟ್ಟುವಿನಲ್ಲಿ ಮರವು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಆರೇಳು ವಿದ್ಯುತ್ ಕಂಬ ಸಹಿತ, ವಿದ್ಯುತ್ ‌ಲೈನ್ ಗಳು‌ ನೆಲಕ್ಕೆ‌ಉರುಳಿ‌ ಹಾನಿ‌ ಸಂಭವಿಸಿದೆ. ಉಡುಪಿ- ಮಲ್ಪೆ ಹೆದ್ದಾರಿ‌ ಸಂಪರ್ಕ ತಾತ್ಕಾಲಿಕ ಬಂದ್ ಆಗಿದ್ದು, ವಾಹನಗಳು ಪರ್ಯಾಯವ ಮಾರ್ಗದಲ್ಲಿ ಸಂಚರಿಸುತ್ತಿದೆ.
ತಡರಾತ್ರಿ ಮರ ಬಿದ್ದಿದ್ದರೂ‌‌ ಬೆಳಗ್ಗೆ‌ 7 ಗಂಟೆಯಾದರೂ ಸಂಬಂಧಪಟ್ಟ ಇಲಾಖೆಗಳು ಮರ ತೆರವುಗೊಳಿಸಲು ಮುಂದಾಗಿಲ್ಲ ಎಂದು ‌ಸ್ಥಳೀಯರು ಆರೋಪಿಸಿದ್ದಾರೆ.