ಡೈಲಿ ವಾರ್ತೆ: 27/ಜೂ./2024

ತೀರ್ಥಹಳ್ಳಿ:ಕಾರು ಪಲ್ಟಿ – ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು!

ತೀರ್ಥಹಳ್ಳಿ: ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ಯಡೂರು ಸಮೀಪ ಮತ್ತಿಗ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಓರ್ವ ಯುವಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತಪಟ್ಟ ಯುವಕ ಅತಿಶಯ ಅಮೀನ್ (23) ಎಂದು ಗುರುತಿಸಲಾಗಿದೆ.

ತೀರ್ಥಹಳ್ಳಿಯ ಬುಕ್ಲಾಪುರ ಹಾಗೂ ಹೊರಬೈಲಿನ ಐವರು ಯುವಕರು ಜೂ. 26 ರಂದು ಬುಧವಾರ ಬೆಳಿಗ್ಗೆ ಮೀನು ಹಿಡಿಯಲು ಹೋಗಿದ್ದು. ಕಾರಿನಲ್ಲಿ ವಾಪಸು ಬರುವ ಸಂದರ್ಭ ಯಡೂರು ಸಮೀಪ ಮತ್ತಿಗೆ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ ಹೊಡೆದಿದೆ.
ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು
ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದರು.
ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಆದರೆ ಇಂದು ಅತಿಶಯ ಅಮೀನ್ ಚಿಕಿತ್ಸೆ ಫಲಿಸದೆ ಮೃತ ಪಟ್ಟಿರುತ್ತಾರೆ.

ಮೃತ ಅತಿಶಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಶ್ರೀನಿವಾಸ್ ಅಮೀನ್ ಅವರ ಸಹೋದರಿ ಮಗ ಎನ್ನುವುದು ತಿಳಿದು ಬಂದಿದೆ.