ಡೈಲಿ ವಾರ್ತೆ: 28/ಜೂ./2024
ಫಲಿಮಾರ್ – ಇನ್ನಾ ದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ.
ಭಾರತದ ಮುಸ್ಲಿಂ ಸಮುದಾಯದ ಪ್ರಭಲ ಉಲಮಾ ಒಕ್ಕೂಟವಾದ ಸಮಸ್ತದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮುದಾಯದ ಸಕಲ ಸಮಸ್ಯೆಗಳನ್ನು ಪರಿಹರಿಸಿ ನಾಡಿನ ಶಾಂತಿ ಸೌಹಾರ್ಧತೆಯನ್ನು ಸಂರಕ್ಷಿಸಲು ಸಾಧ್ಯ ಎಂದು ಇನ್ನಾ, ಫಲಿಮಾರು ಜುಮಾ ಮಸೀದಿಯ ಧರ್ಮಗರುಗಳಾದ ಮೌಲಾನಾ ಅಬ್ದುಲ್ ಸಲಾಮ್ ಯಮಾನಿ ತುಂಬೆ ಹೇಳಿದರು.
ಅವರು ಬುಧವಾರ ಫಲಿಮಾರು, ಇನ್ನಾ ಹಯಾತುಲ್ ಇಸ್ಲಾಮ್ ಮದ್ರಸದಲ್ಲಿ ಎಸ್ ಕೆ ಎಸ್ ಎಸ್ ಎಫ್. ಮತ್ತು ಎಸ್ ಕೆ ಎಸ್ ಬಿ ವಿ. ಸಂಘಟಣೆಯ ಆಶ್ರಯದಲ್ಲಿ ನಡೆದ ಸಮಸ್ತದ ೯೯ನೇ ಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು .
ಸ್ವಾತಂತ್ರ್ಯ ಪೂರ್ವದಲ್ಲೇ ೧೯೨೬ ರಲ್ಲಿ ಪ್ರವಾದಿಯವರ ನಿರ್ದೇಶನದಂತೆ , ಭಾರತದ ಮುಸಲ್ಮಾನರ ಧಾರ್ಮಿಕ, ಸಾಮಾಜಿಕ, ಶೆೃಕ್ಷಣಿಕ ಪ್ರಗತಿಗಾಗಿ ಸ್ಥಾಪಿತವಾದ ಸಮಸ್ತ ವು ೯೮ ವರ್ಷಗಳಲ್ಲಿ ತನ್ನ ನಿಷ್ಕಳಂಕವಾದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸ್ರಷ್ಟಿಸಿದೆ ಎಂದು ತಿಳಿಸಿದರು.
ಮಡ್ಮನ್ ಹಿದಾಯತುಲ್ ಇಸ್ಲಾಮ್ ಮದ್ರಸದ ಮುಖ್ಯ ಶಿಕ್ಷಕ ಇಬ್ರಾಹಿಂ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎಂ,ಪಿ. ಮೊೃದಿನಬ್ಬ ಶುಭಾಶಂಶನೆ ಗೆೃದರು. ಹಯಾತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಟಿ. ಉಮರಬ್ಬ, ಕಾರ್ಯದರ್ಶಿ ಅಬ್ದುಲ್ಮರದ ರಹ್ಮಾನ್, ಕೋಸಲಾಧಿಕಾರಿ ಕೆ. ಖಾಸಿಮ್ , ಕಾಂಜರಕಟ್ಟೆ ನೂರುಲ್ ಹುದಾ ಮದ್ರಸದ ಮುಖ್ಯ ಶಿಕ್ಷಕರು , ಪಿ ಎಚ್. ಅಬ್ದುಲ್ ಮುತ್ತಲಿಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಸ್ತದ ನಾಯಕರಾಗಿ ಮಸೀದಿ, ಮದ್ರಸಗಳಲ್ಲಿ ಸೇವೆ ಸಲ್ಲಿಸಿದ ಹಾಜಿ ಪಿ ಎಚ್. ಮೊೃದಿನಬ್ಬ, ಹಾಜಬ್ಬ ರೆಂಜಾಳ, ಎಂ.ಪಿ ಅಬೂಬಕ್ಕರ್, ಅಬ್ದುಲ್ ಮುತ್ತಲಿಬ್, ಹುಸೇನ್ ಮಹಮ್ಮದ್, ಅಬ್ದುಲ್ ಖಾದರ್, ಕರ್ನಿರೆ ಖಾಸಿಮ್ ರವರನ್ನು ಮತ್ತು ಮಸೀದಿ ಮದ್ರಸಗಳ ಅಧ್ಯಾಪಕರನ್ನು ಸನ್ಮಾನಿಸಲಾಯಿತು. ಎಸ್ ಕೆ ಎಸ್ ಎಸ್ ಎಫ್ ಘಟಕಾಧ್ಯಕ್ಷ ದಾದಾಪೀರ್ , ಕಾರ್ಯದರ್ಶಿ ಎಂ ಝಾಹಿರ್, ಖಜಾಂಚಿ ಇಬ್ರಾಹಿಂ ಬಾವಾ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮೌಲಾನಾ ನೌಫಲ್ ದಾರಿಮಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.