ಡೈಲಿ ವಾರ್ತೆ: 29/ಜೂ./2024

ತೀರ್ಥಹಳ್ಳಿ: ಮನೆಗೆ ಕನ್ನ ಹಾಕಲು ಬಂದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾ. ಪಂ. ವ್ಯಾಪ್ತಿಯ ಮಾನಿ ಸಮೀಪ ಮನೆಯೊಂದರ ಬೀಗ ಒಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜೂ.29ರ ಶನಿವಾರ ಬೆಳಗ್ಗೆ ನಡೆದಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಲು ಮೂವರು ಬಂದು ಮೇಲಿನ ಕುರುವಳ್ಳಿ ಮೇಳಿಗೆ ರಸ್ತೆಯ ನೀರಿನ ಟ್ಯಾಂಕ್ ಸಮೀಪ ಕಳ್ಳತನಕ್ಕೆ ಯತ್ನಿಸಿದ್ದಾರೆ.

ದೇವಯ್ಯ ಎಂಬವರ ಕುಟುಂಬದವರು ಮನೆಗೆ ಬೀಗ ಹಾಕಿ ಕಾಶಿಯಾತ್ರೆಗೆ ಹೋಗಿರುವ ವಿಷಯ ತಿಳಿದು ಕಳ್ಳರು ಮನೆಗೆ ಬಂದು ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ.
ವಿಷಯ ಅರಿತ ಗ್ರಾಮಸ್ಥರು ಕೆಲವರು ಸೇರಿ ಮೂವರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.