ಡೈಲಿ ವಾರ್ತೆ: 29/ಜೂ./2024
ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟಬುಮ್ರಾ ಮ್ಯಾಜಿಕ್, ಸೂರ್ಯ ಸ್ಟನಿಂಗ್ ಕ್ಯಾಚ್-ಭಾರತಕ್ಕೆ ರೋಚಕ 7 ರನ್ ಜಯ
ಬ್ರಿಡ್ಜ್‌ಟೌನ್(ಬಾರ್ಬಡೋಸ್): ಶತಕೋಟಿ ಭಾರತೀಯರು ಕನಸು, ಪ್ರಾರ್ಥನೆಗೆ ಕೊನೆಗೂ ಈಡೇರಿತು. 17 ವರ್ಷದ ಬಳಿಕ ಟಿ 20 ವಿಶ್ವಕಪ್ ಗೆಲ್ಲುವ ಭಾರತದ ಕನಸಾಗಿದೆ.
ರೋಚಕ 7 ರನ್‌ಗಳ ಜಯ ಸಾಧಿಸುವುದರೊಂದಿಗೆ ಭಾರತ ಎರಡನೇ ಬಾರಿ ಟಿ20 ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಗೆಲ್ಲಲು 177 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.