

ಡೈಲಿ ವಾರ್ತೆ: ಮಾ./02/2026

ಕೋಟದ ಶ್ರೀ ಅಮೃತೇಶ್ವರಿ ದೇಗುಲದಲ್ಲಿ ಏಕಃಪವಿತ್ರ ನಾಗಮಂಡಲ ಸೇವೆ ಸಂಪನ್ನ

ಕೋಟ: ಕೋಟದ ಶ್ರೀಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವತಿಯಿಂದ ಭಾನುವಾರ ಕೋಟದ ಗಾಂಧಿ ಮೈದಾನದಲ್ಲಿ ವೈಭವದ ಏಕಃಪವಿತ್ರ ನಾಗಮಂಡಲ ಸೇವೆ ಸಂಪನ್ನಗೊಂಡಿತು.
ಮಂಡಲೋತ್ಸವದಲ್ಲಿ ಸುಮಾರು 40,000 ಅಧಿಕ ಮಂದಿ ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿ ನಾಗಮಂಡಲೋತ್ಸವದಲ್ಲಿ ಭಾಗಿಯಾದರು.

ಸಂಜೆ 7.00 ಗಂಟೆಗೆ ನಾಗನಿಗೆ ಹಾಲಿಟ್ಟು ಸೇವೆ ನಡೆದು 9:30 ರಿಂದ ನಾಗಮಂಡಲೋತ್ಸವಕ್ಕೆ ಚಾಲನೆ ದೊರಕಿದ್ದು ಮಣೂರು ಮಧುಸೂದನ ಬಾಯರಿ ಮತ್ತು ಬಳಗದವರ ನೇತೃತ್ವದಲ್ಲಿ ಧಾರ್ಮೀಕ ವಿಧಿವಿಧಾನಗಳು ನಾಗಮಂಡಲದ ಕೇಂದ್ರದಲ್ಲಿ ನೆರವೆರಿತು.

ಮಂಡಲೋತ್ಸವದಲ್ಲಿ ಪಾತ್ರಿಗಳಾಗಿ ಕಾರ್ಕಡ ವೆಂಕಟರಮಣ ಹೊಳ್ಳ ಮತ್ತು ವೈದ್ಯರಾಗಿ ರಾಘವೇಂದ್ರ ವೈದ್ಯ ಮತ್ತು ಬಳಗ ಬಾಗಿಯಾದರು.
ಸಹಸ್ರ ಸಂಖ್ಯೆಯಲ್ಲಿ ಮಂಡಲ ಸೇವೆಯನ್ನು ಕಣ್ತುಂಬಿಕೊಂಡರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಸದಸ್ಯರಾದ ಕೆ.ಸುಬ್ರಾಯ ಜೋಗಿ, ಸುಭಾಷ್ ಶೆಟ್ಟಿ, ಗಣೇಶ್ ಕೆ. ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಧಾ ಎ. ಪೂಜಾರಿ, ರತನ್ ಐತಾಳ, ಶಿವ ಪೂಜಾರಿ, ಚಂದ್ರಶೇಖರ ಆಚಾರ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.