

ಡೈಲಿ ವಾರ್ತೆ: ಮಾ./02/2026

ಮಾರ್ಚ್ 03 ರ ಬ್ರಹ್ಮರಕೊಟ್ಲು ಟೋಲ್ ವಿರೋಧಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ, ಸುಹೈಲ್ ಖಂದಕ್

ಮಾರ್ಚ್ 03 ರಂದು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ಸಮೀಪ ನಡೆಯುವ ಸಾಮೂಹಿಕ ಧರಣಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಸಮಿತಿ ಸಂಚಾಲಕ ಸುಹೈಲ್ ಖಂದಕ್ ತಿಳಿಸಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅವೈಜ್ಞಾನಿಕ, ಮತ್ತು ಅಸಮರ್ಪಕ ವಾಗಿ ಕಾರ್ಯಾಚರಣೆ ನಡೆಸುತ್ತಿರುರುವ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಕೂಡಲೇ ತೆರವು ಗೊಳಿಸಬೇಕು, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸತಾಗಿ ರಚನೆ ಆಗುತ್ತಿರುವಂತಹ ಟೋಲ್ ಗೇಟ್ ಗಳ ವಿರುದ್ಧ ಕೂಡಾ ದ್ವನಿ ಎತ್ತಿ ಲಾಗುವುದು ಎಂದರು.
ಬ್ರಹ್ಮರಕೊಟ್ಲು ಟೋಲ್ ಪ್ಲಾಜಾ ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿದ್ದು ಇದು ಜಿಲ್ಲೆಯ ಜನತೆಗೆ ಮಾಡುವ ಮಹಾ ಮೋಸ ಮತ್ತು ಹಗಲು ದರೋಡೆ ಆಗಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಸಂಘಟಿತವಾಗಿ ಸಕ್ರಿಯ ಹೋರಾಟಗಳನ್ನು ನಿರಂತರ ಮಾಡುವ ಮೂಲಕ ಬ್ರಹ್ಮರ ಕೋಟ್ಲು ಟೋಲ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬೇಕು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಸುಹೈಲ್ ಖಂದಕ್ ಮಂಗಳೂರು ತಿಳಿಸಿದರು
ಸಮಿತಿಯ ಪ್ರಮುಖರಾದ ಉಮೇಶ್ ಕುಮಾರ್ ವೈ, ಅನ್ವರ್ ಸಾದತ್ ಬಜತ್ತೂರು, ಹನೀಫ್ ಖಾನ್ ಕೊಡಾಜೆ, ಧನರಾಜ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.