ಡೈಲಿ ವಾರ್ತೆ: 01/ಜುಲೈ /2024
ಉಡುಪಿ: ಸಂಚಾರಿ ಪೊಲೀಸ್ ಹಾಗೂ ಆರ್ ಟಿಓ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ – ವಾಕ್ಯೂಮ್ ಹಾರ್ನ್ ಗಳನ್ನು ಹಾಕಿ ಸಂಚರಿಸುತ್ತಿದ್ದ ಬಸ್ಸುಗಳ ವಿರುದ್ಧ ಕ್ರಮ, ಹಾಗೂ ದಂಡ!
ಉಡುಪಿ: ಉಡುಪಿಯಲ್ಲಿ ಸಂಚಾರಿ ಪೊಲೀಸರು ,ಅ ರ್ ಟಿಓ ಅಧಿಕಾರಿಗಳು ಹಾಗೂ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿಯಾಗಿ ಖಾಸಗಿ ಬಸ್ ಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ನಡೆಸಿದರು
ಉಡುಪಿ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಗರದಲ್ಲಿ ವಾಕ್ಯೂಮ್ ಹಾರ್ನ್ ಗಳನ್ನು ಹಾಕಿ ಸಂಚರಿಸುತ್ತಿದ್ದ ಬಸ್ಸುಗಳ ವಿರುದ್ಧ ಕ್ರಮ ಕೈಗೊಂಡರು.
ಬಸ್ ಗಳಲ್ಲಿ ಹಾಕಲಾಗಿದ್ದ ವ್ಯಾಕ್ಯೂಮ್ ಹೊರ್ನುಗಳನ್ನ ಕಿತ್ತು ತೆಗೆದು ವಿರುದ್ಧ ಅಧಿಕಾರಿಗಳು ದಂಡ ವಿಧಿಸಿದರು.
ಉಡುಪಿ ಎಸ್ಪಿ ಡಾ ಅರುಣ್ ಕುಮಾರ್ ಇವರ ಆದೇಶದ ಮೇರೆಗೆ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದರು , ಸಾರ್ವಜನಿಕರಿಂದ ಹಲವು ಸಮಯಗಳಿಂದ ದೂರುಗಳು ಕೇಳಿ ಬಂದಿದ್ದು ಬಸ್ಸುಗಳು ಕರ್ಕಶ ಹರಣಗಳನ್ನು ಹಾಕಿಕೊಂಡು ಶಬ್ದ ಮಾಲಿನ್ಯ ಮಾಡುತ್ತಿದ್ದು ಇದರಿಂದ ಶಾಲಾ ಪರಿಸರ , ಕೋರ್ಟ್ ಸೇರಿದಂತೆ ನಗರದಲ್ಲಿ ವಿಪರೀತ ಶಬ್ದ ಮಾಲಿನ್ಯ ಉಂಟಾಗುತ್ತಿತ್ತು ಇದನ್ನ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
ಅರ್ ಟಿ ಓ ಅಧಿಕಾರಿಗಳಾದ ಮಾರುತಿ, ಸಂತೋಷ ಶೆಟ್ಟಿ ಸಂಚಾರಿ ಪೊಲೀಸ್ ಅಧಿಕಾರಿಗಳಾದ ಪ್ರಕಾಶ್ ಶೇಖರ್ ,ಸುದರ್ಶನ್ ದೊಡ್ಡಮಣಿ ಪರಿಸರ ಮಾಲಿನ್ಯ ನಿಯಮತ್ರಣ ಮಂಡಳಿಯ ದಾಮೋದರ್ ಶೆಟ್ಟಿ ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.