ಡೈಲಿ ವಾರ್ತೆ: 02/ಜುಲೈ /2024
ರೀಲ್ಸ್‌ಗಾಗಿ ಸ್ಕೂಟರ್ ಸಮೇತ
ಸಮುದ್ರದ ನೀರಿಗೆ ಇಳಿದ ಯುವಕ – ವೀಡಿಯೋ ವೈರಲ್
ಈಗೇನಿದ್ದರೂ ಸೋಶಿಯಲ್ ಮೀಡಿಯಾದ್ದೇ ಹವಾ. ರೀಲ್ಸ್‌ಗಾಗಿ ಯುವಕ, ಯುವತಿಯರು ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬ ಕಡಲಬ್ಬರದ ಅಲೆಗಳ ನಡುವೆ ಸ್ಕೂಟರ್ ಜೊತೆಗೆ ನೀರಿಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ. ಆದರೆ ಈ ರೀತಿಯ ಸಾಹಸಕ್ಕೆ ಯಾರೂ ಹಾಕಬೇಡಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಆತ ಹೆಲ್ಮೆಟ್ ಕೂಡ ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಬಳಿಕ ತನ್ನ ಸ್ಕೂಟರ್ ಅನ್ನು ಯಾವುದೇ ರಸ್ತೆಯಲ್ಲಿ ಓಡಿಸದೆ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ. ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ಬರುವ ಅಲೆಗಳನ್ನು ಸಹ ನೋಡಬಹುದು. ಅಲೆಗಳು ಅಪ್ಪಳಿಸಿದ್ರೂ ಯುವಕ ಕಿಂಚಿತ್ತೂ ಅಂಜದೆ ಸ್ಕೂಟರ್ ಚಾಲನೆ ಮಾಡಿದ್ದಾನೆ.
ಈ ಬೆನ್ನಲ್ಲೇ ಮತ್ತೊಂದು ದೊಡ್ಡದಾದ ಅಲೆ ಬಂದಿದೆ. ಈ ವೇಳೆ ಯುವಕ ತನ್ನ ಸ್ಕೂಟರ್ ಅನ್ನು ದಡದತ್ತ ತಿರುಗಿಸಿದ್ದಾನೆ. ಅಲೆಯು ಕೂಡ ಯುವಕನನ್ನು ದಡದತ್ತ ನೂಕಿದೆ. ಒಟ್ಟಿನಲ್ಲಿ ಯುವಕ ಸೇಫ್ ಆಗಿ ದಡ ಸೇರಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.