ಡೈಲಿ ವಾರ್ತೆ: 03/ಜುಲೈ /2024

ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ. ವಲೇರಿಯನ್ ಮೆಂಡೊನ್ಸಾ ಹೃದಯಾಘಾತದಿಂದ ನಿಧನ

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ. ವಲೇರಿಯನ್ ಮೆಂಡೋನ್ಸಾ (75) ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಶಿರ್ವ ಸಮೀಪದ ಪಿಲಾರ್ ಚರ್ಚಿನಲ್ಲಿ 1949 ರ ಡಿಸೆಂಬರ್ 9 ರಂದು ಜನಿಸಿದ್ದ ಅವರಿಗೆ 1976 ರ ಮೇ 7 ರಂದು ಗುರುದೀಕ್ಷೆ ಲಭಿಸಿತ್ತು. ಬಳಿಕ ವಿವಿಧ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.