ಡೈಲಿ ವಾರ್ತೆ: 05/ಜುಲೈ /2024

ಶಿವಪುರ: ಬೈಕ್ ಹಾಗೂ ಜೆಸಿಬಿ ನಡುವೆ ಅಪಘಾತ – ಪತ್ರಿಕೆ ವಿತರಕ ಸಾವು

ಹೆಬ್ರಿ: ಶಿವಪುರ ಸಮೀಪ ನಾಯರ್ ಕೋಡು ಬಳಿ ಜೆಸಿಬಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪತ್ರಿಕೆಯ ವಿತರಕ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಮೃತಪಟ್ಟ ಯುವಕ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಹಿಂಬದಿ ಸವಾರ ಸಹೋದರ ಪ್ರೀತಿಶ್ ಗೆ ಸಣ್ಣ ಪುಟ್ಟ ಗಾಯವಾಗಿದೆ.

ಮುನ್ನ ಎಂದೆ ಗೆಳೆಯರಿಂದ ಕರೆಯಲ್ಪಡುತ್ತಿದ್ದ ಪ್ರತ್ಯಕ್ಷ ಶಿವಪುರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.
ತಂದೆಯನ್ನು ಕಳೆದುಕೊಂಡಿದ್ದ ಪ್ರತ್ಯಕ್ಷ ಮನೆಯ ಆದರ ಸ್ತಂಭವಾಗಿದ್ದು, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು.

ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.