ಡೈಲಿ ವಾರ್ತೆ: 07/ಜುಲೈ /2024

ಮೂವರ ಮೇಲೆ ದಾಳಿ ಮಾಡಿದ ಚಿರತೆಯನ್ನು ಹುಡುಕಿ ಕೊಂದ ಗ್ರಾಮಸ್ಥರು!

ರಾಯಚೂರು: ಜಿಲ್ಲೆಯ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ‌ ಹೆದರಿಸಲು ಹೋದ ಮೂವರ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಆದರೆ ಇದೀಗ ಚಿರತೆ ತಪ್ಪಿಸಿಕೊಂಡರೇ ಮತ್ತೆ ದಾಳಿ‌ ನಡೆಸುವ ಭಯದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆಯೇ ಸಾರ್ವಜನಿಕರು ಚಿರತೆ ಕೊಂದು ಹಾಕಿದ್ದಾರೆ. ಆ ಮೂಲಕ ಜನರು ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ. ಬಳಿಕ ಪಶು ಆಂಬ್ಯುಲೆನ್ಸ್​ನಲ್ಲಿ ಚಿರತೆ ಹಾಕಿ ಸಾಗಾಟ ಮಾಡಲಾಗಿದೆ. ದೇವದುರ್ಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿರತೆ ಓಡಿಸಲು ಹೋದ ಮೂವರ ಮೇಲೆ ಬೆಳಿಗ್ಗೆ ದಾಳಿ ಹಿನ್ನೆಲೆ ಅರಣ್ಯ ಇಲಾಖೆ‌ ಸಿಬ್ಬಂದಿಯಿಂದ ಚಿರತೆ ಸೆರೆಗೆ ಕಾರ್ಯಾಚರಣೆ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ಸಿಗದ ಚಿರತೆ ನಂತರ ಸಿಕ್ಕಿದ್ದು, ಸ್ಥಳೀಯರು ಸಾಯಿಸಿದ್ದಾರೆ.