ಡೈಲಿ ವಾರ್ತೆ: 09/ಜುಲೈ /2024

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭೀತಿ ಹುಟ್ಟಿಸಿದ್ದ ಖತರ್ನಾಕ್ ಚಡ್ಡಿ ಗ್ಯಾಂಗ್ ನ್ನು ಬಂಧಿಸಿದ ಖಾಕಿ ಪಡೆ

ಮಂಗಳೂರು: ಮಂಗಳೂರಿನ ಎರಡು ಕಡೆಗಳಲ್ಲಿ ಕಳ್ಳತನ, ದರೋಡೆ ನಡೆಸಿರುವ ಶಂಕಿತ ಚಡ್ಡಿ ಗ್ಯಾಂಗನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳು ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (24 ವರ್ಷ), ಭೂಪಾಲ್ ನ ಮಯೂರ್ (30 ವರ್ಷ), ಬಾಲಿ (22 ವರ್ಷ), ಗುಣಾ ಜಿಲ್ಲೆಯ ವಿಕ್ಕಿ (21 ವರ್ಷ) ನಾಲ್ವರು ಬಂಧಿತರು.

ಮಂಗಳೂರಿನ ಕೋಟೆಕಣಿಯಲ್ಲಿ ಮನೆಯವರಿಗೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿ ಅದೇ ಮನೆಯ ಕಾರಿನಲ್ಲಿ ಮೂಲ್ಕಿಯವರೆಗೆ ಹೋಗಿದ್ದ ದರೋಡೆಕೋರರು ಅಲ್ಲಿಂದ ಮಂಗಳೂರಿಗೆ ಬಸ್ ನಲ್ಲಿ ಬಂದು ಬಳಿಕ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಸಕಲೇಶಪುರದಲ್ಲಿ ವಶಕ್ಕೆ ಪಡೆಯಲಾಗಿದೆ.

ಈ ಗ್ಯಾಂಗ್ ಚಡ್ಡಿ ಮತ್ತು ಬನಿಯಾನ್ ಧರಿಸಿ ಕಳ್ಳತನ, ದರೋಡೆ ನಡೆಸುವ ತಂಡವಾಗಿದ್ದು ರಾಜಸ್ತಾನ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಸೇರಿದವರು ಇದರಲ್ಲಿದ್ದಾರೆ ಎನ್ನಲಾಗಿದೆ.

ಸದ್ಯ ಇಂದು ಪೊಲೀಸರ ದಕ್ಷ ಕಾರ್ಯಾಚರಣೆಯಲ್ಲಿ ಶಂಕಿತ ಚಡ್ಡಿ ಗ್ಯಾಂಗ್ ನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.