ಡೈಲಿ ವಾರ್ತೆ: 12/ಜುಲೈ /2024

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ನೂತನ ಅಧ್ಯಕ್ಷರಾಗಿ
ಲಯನ್ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಆಯ್ಕೆ

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಟಪಾಡಿ ಶ್ರೀನಿಕೇತನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಲಯನ್ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಇವರು ಆಯ್ಕೆ ಆಗಿರುತ್ತಾರೆ.

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನೂತನ ಕಾರ್ಯದರ್ಶಿಯಾಗಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ ಮತ್ತು ನೂತನ ಕೋಶಾಧಿಕಾರಿಯಾಗಿ ಲಯನ್ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಪ್ರಥಮ ಉಪಾಧ್ಯಕ್ಷರಾಗಿ ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ.
ಕ್ಲಬ್ ಗ್ಲೋಬಲ್ ಮೆಂಬರ್‍ಶಿಪ್ ಟೀಮ್‍ನ ಕೋ-ಆರ್ಡಿನೇಟರ್ ಆಗಿ ಲಯನ್ ಚಂದ್ರ ಶೆಟ್ಟಿ ಯಾಳಕ್ಲು ವಡ್ಡರ್ಸೆ, ಕ್ಲಬ್ ಮಾರ್ಕೇಟಿಂಗ್ & ಕಮ್ಯುನಿಕೇಶನ್ ಆಫೀಸರ್ ಆಗಿ ಲಯನ್ ಕರುಣಾಕರ ಶೆಟ್ಟಿ, ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಲಯನ್ ರವಿರಾಜ್ ಶೆಟ್ಟಿ ವಡ್ಡರ್ಸೆ, ಕ್ಲಬ್ ಎಲ್.ಸಿ.ಐ.ಎಫ್. ಕೋ-ಆರ್ಡಿನೇಟರ್ ಆಗಿ ಲಯನ್ ಬನ್ನಾಡಿ ಸಂತೋಷ್ ಶೆಟ್ಟಿ, ಕ್ಲಬ್ ಮೆಂಬರ್‍ಶಿಪ್ ಕಮಿಟಿ ಚೇರ್‍ಮೆನ್ ಆಗಿ ಲಯನ್ ಕೂರಾಡಿ ಸಂತೋಷ್ ಕುಮಾರ್ ಶೆಟ್ಟಿ, ಕ್ಲಬ್ ಸರ್ವೀಸ್ ಚೇರ್ ಪರ್ಸನ್ ಆಗಿ ಲಯನ್ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ಟೈಲ್ ಟ್ವಿಸ್ಟರ್ ಆಗಿ ಲಯನ್ ರಂಜಿತ್ ಶೆಟ್ಟಿ ಯಾಳಕ್ಲು ಹಾಗೂ ಲಯನ್ ಟೇಮರ್ ಆಗಿ ಲಯನ್ ಸುಭಾಸ್ ಶೆಟ್ಟಿ ಮಧುವನ ಆಯ್ಕೆಯಾಗಿರುತ್ತಾರೆ.
ಬೋರ್ಡ್ ಆಫ್ ಡೈರೆಕ್ಟರ್ ಆಗಿ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ, ಲಯನ್ Adv. ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ಪ್ರೊ| ಕಲ್ಕಟ್ಟೆ ಚಂದ್ರಶೇಖರ ಶೆಟ್ಟಿ, ಲಯನ್ ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ, ಲಯನ್ ಉಪ್ಲಾಡಿ ಸುಗುಣಾಕರ ಶೆಟ್ಟಿ, ಲಯನ್ ಕೆ ಸುಭಾಶ್ಚಂದ್ರ ಶೆಟ್ಟಿ ಬನ್ನಾಡಿ, ಲಯನ್ ರಾಜೀವ್ ಶೆಟ್ಟಿ ಅಚ್ಲಾಡಿ, ಲಯನ್ ವಂಸತ್ ವಿ ಶೆಟ್ಟಿ ಸೂರಿಬೆಟ್ಟು ಅಚ್ಲಾಡಿ, ಲಯನ್ ಅಚ್ಲಾಡಿ ಸುಧಾಕರ ಶೆಟ್ಟಿ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಮತ್ತು ಲಯನ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಆಯ್ಕೆಯಾಗಿರುತ್ತಾರೆ.

ಕ್ಲಬ್ ಮೆಂಬರ್ಸ್ ಆಗಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ, ಲಯನ್ ಬನ್ನಾಡಿ ಶರತ್ ಶೆಟ್ಟಿ, ಲಯನ್ ಮಹೇಂದ್ರ ಆಚಾರ್ ಮಧುವನ, ಲಯನ್ ಬಿ.ಬಿ ಜೀವನ್, ಲಯನ್ ರೆಹಮತ್ ಮಧುವನ, ಲಯನ್ Adv ಬನ್ನಾಡಿ ವಿನಯ್ ಶೆಟ್ಟಿ, , ಲಯನ್ ಲಕ್ಷ್ಮಣ್ ಶೆಟ್ಟಿ ಕೊಮೆ ಅಚ್ಲಾಡಿ, ಲಯನ್ ವಡ್ಡರ್ಸೆ ನವೀನ್ ಶ್ಯಾನುಭೋಗ್, ಲಯನ್ ನಿತಿಶ್ ಆಚಾರ್ಯ ಮಧುವನ, ಲಯನ್ ಶರತ್ ಕುಮಾರ್ ಶೆಟ್ಟಿ ಕೊಮೆ, ಲಯನ್ ಗುಂಡು ಶೆಟ್ಟಿ ಮಾನಂಬಳ್ಳಿ, ಲಯನ್ ಉಲ್ಲಾಸ್ ಶೆಟ್ಟಿ ಕಾವಡಿ, ಲಯನ್ ದಿನೇಶ್ ಶೆಟ್ಟಿ ಯರ್ನಾಡಿ, ಲಯನ್ ಅಶ್ವಥ್ ಶೆಟ್ಟಿ ಸೂರಿಬೆಟ್ಟು ಮತ್ತು ಲಯನ್ ಹರೀಶ್ ಶೆಟ್ಟಿ ಆಯ್ಕೆಯಾಗಿರುತ್ತಾರೆ ಎಂದು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕ ಅಧ್ಯಕ್ಷರಾದ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ದಿನಾಂಕ: 27-07-2024 ರಂದು ಸಂಜೆ 6:30 ಗಂಟೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ “ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನ” ಬನ್ನಾಡಿ ಇಲ್ಲಿ ಜರುಗಲಿದ್ದು ಮಾಜಿ ಜಿಲ್ಲಾ ಗವರ್ನರ್ ಲಯನ್. ವಿ.ಜಿ. ಶೆಟ್ಟಿ ಪದಪ್ರಧಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.