ಡೈಲಿ ವಾರ್ತೆ: 12/ಜುಲೈ /2024

ಗಂಗೊಳ್ಳಿ ತೌಹೀದ್‌ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸಂಸತ್‌ ರಚನೆ – ವಿದ್ಯುನ್ಮಾನ ಯಂತ್ರದ ಮೂಲಕ ಚುನಾವಣೆ

ಗಂಗೊಳ್ಳಿ: ಗಂಗೊಳ್ಳಿ ತೌಹೀದ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್‌ ರಚನೆಯು ಸಾವ್ರರ್ತಿಕ ಚುನಾವಣೆ ಮಾದರಿಯಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಸಿ ಜು. 11 ರಂದು ಗುರುವಾರ ಚುನಾವಣೆ ನಡೆಸಲಾಯಿತು.

ತೌಹೀದ್‌ ಸಂಸ್ಥೆಯ ಶೈಕ್ಷಣಿಕ ಮೇಲ್ವಿಚಾರಕರಾದ ಶ್ರೀಮತಿ ನಿಶಾ ಕಿರಣ್‌ ರವರು ರಿಬ್ಬನ್‌ ಕತ್ತರಿಸುವ ಜೊತೆಗೆ ಮೊದಲ ಮತದಾನದೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಸಭಾ ಬಾನುರವರು ಉಪಸ್ಥಿತರಿದ್ದರು.
ಚುನಾವಣೆ ಅಧಿಸೂಚನೆ ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆ ನಾಮ ಪತ್ರ ಪರಿಶೀಲನೆ, ಚುನಾವಣಾ ಪ್ರಚಾರ, ಚುನಾವಣಾ ತಯಾರಿ, ಮತ ಎಣಿಕೆ ಕ್ರಮಬದ್ಧವಾಗಿ ನಿರ್ವಹಿಸಲಾಯಿತು. ಬೂತ್‌ ಮಟ್ಟದ ಅಧಿಕಾರಿಗಳಾಗಿ ಪ್ರತಿ ವಿದ್ಯಾರ್ಥಿಗಳಿಗೆ ಮತ ಚೀಟಿಗಳನ್ನು ಶಿಕ್ಷಕಿಯರಾದ ಶ್ರೀಮತಿ ಸವಿತಾ ಮತ್ತು ಶ್ರೀಮತಿ ಪೂರ್ಣಿಮಾರವರು ನಿರ್ವಹಿಸಿದರು. ಮತದಾನದ ಕಂಟ್ರೋಲ್‌ ಯುನಿಟ್‌ಗಳನ್ನು ಶಿಕ್ಷಕಿಯರಾದ ಕು. ಅಶ್ವಿನಿ ಕೆ. ಮತ್ತು ಶ್ರೀಮತಿ ಪ್ರೀತಮ್‌ರವರು ನಿರ್ವಹಿಸಿದರು.
ಮತದಾನದ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ಸಹಿ ಪಡೆಯಲಾಯಿತು. ವಿದ್ಯಾರ್ಥಿಗಳು ಮುಕ್ತವಾಗಿ ನ್ಯಾಯಯುತವಾಗಿ ತಮ್ಮ ಮತ ಚಲಾಯಿಸಿದರು. ಮತದಾನ ನೀಡಿದ ಗುರುತಿಗಾಗಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಯಿತು. ತಂತ್ರಜ್ಞಾನ ಅಳವಡಿಕೆಯ ಮತದಾನ ಮಾಡುವ ರೀತಿ ವಿಧಾನಗಳನ್ನು ಶಿಕ್ಷಕಿ ಶ್ರೀಮತಿ ಪ್ಲೇವಿಯಾ ಮತ್ತು ಕು.ಅಶ್ವಿನಿ ಬಿ. ಯವರು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೊನೆಯಲ್ಲಿ ಮತ ಎಣಿಕೆಯು ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸಲಾಯಿತು. ಒಟ್ಟಿನಲ್ಲಿ ಪೇಪರ್‌ ರಹಿತವಾಗಿ ವಿದ್ಯುನ್ಮಾನ ಯಂತ್ರದ ಮೂಲಕ ಹೊಸ ಚುನಾವಣಾ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.