ಡೈಲಿ ವಾರ್ತೆ: 12/ಜುಲೈ /2024
ಎಪ್ಸನ್ ಇಂಡಿಯಾ’ ಕಂಪನಿಯಿಂದ ಜಿಎಂಪಿಎಸ್ ಶಿಗ್ಲಿ ಶಾಲೆಗೆ 580 ನೋಟುಬುಕ್ ವಿತರಣೆ
EPSON ಸಂಸ್ಥೆಯ ವತಿಯಿಂದ 580 ನೋಟುಬುಕ್ ಸುಮಾರು 35000 ರೂಪಾಯಿ ಬೆಲೆಯುಳ್ಳ ಸಾಮಗ್ರಿಗಳನ್ನು ಜಿಎಂಪಿಎಸ್ ಶಿಗ್ಲಿ ಶಾಲೆಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿ ಎಂ ಎಂ ಹವಳದ ಮಾತನಾಡಿ
ಮಕ್ಕಳ ಕಲಿಕೆಗೆ ಪೂರಕವಾಗುವ ಉಚಿತ ನೋಟ್ ಪುಸ್ತಕಗಳನ್ನು ‘ಎಪ್ಸನ್ ಇಂಡಿಯಾ’ ಕಂಪನಿಯಿಂದ ವಿತರಿಸಲಾಗುತ್ತಿದೆ.
ಅತಿ ಸುಂದರವಾದ ಶಾಲಾ ಅವರಣದಲ್ಲಿ ನೂರಾರು ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಇಂತಹ ಉತ್ತಮ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿರಿ.
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಬಳಸಿ ಆಧುನಿಕ ತಂತ್ರಜ್ಞಾನ ಬಳಸಿ ಶಿಕ್ಷಣ ನೀಡುತ್ತಿರುವುದು ಅತ್ಯಂತ ಹೆಚ್ಚು ಭರವಸೆಯನ್ನು ಮೂಡಿಸುತ್ತಿದೆ.
ಮಕ್ಕಳ ಕಲಿಕೆಗೆ ಪೂರಕವಾಗುವ ಉಚಿತ ನೋಟ್ ಪುಸ್ತಕಗಳನ್ನು ‘ಎಪ್ಸನ್ ಇಂಡಿಯಾ’ ಕಂಪನಿಯಿಂದ ವಿತರಿಸಲಾಗುತ್ತಿದೆ. ಅತಿ ಸುಂದರವಾದ ಶಾಲಾ ಅವರಣದಲ್ಲಿ ನೂರಾರು ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಇಂತಹ ಉತ್ತಮ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿರಿ.
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಬಳಸಿ ಆಧುನಿಕ ತಂತ್ರಜ್ಞಾನ ಬಳಸಿ ಶಿಕ್ಷಣ ನೀಡುತ್ತಿರುವುದು ಅತ್ಯಂತ ಹೆಚ್ಚು ಭರವಸೆಯನ್ನು ಮೂಡಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹರೀಶ್ ECO, ಎಮ್ ಎಮ್ ಹವಳದ PEO ಎಸ್ ಬಿ ಅಣ್ಣಿಗೇರಿ, ಆರ್ ಡಿ ಕಾಲಾಯಗರ, ಆರ್ ಎಫ್ ಕಪ್ಪಾತ್ತನವರ, ತಿಪ್ಪನಾಯಕ್, ದೀಪಾ ಬೆಸ್ಮ್ ಶಂಕರ ಕಲಾಲ್ ಚಂದ್ರಪ್ಪ ಮೇಗಲಮನಿ, ಮೇರಾಮೋಹಿದೀನ್ ಶಿಗ್ಗಾವ ಮುಂತಾದವರು ಉಪಸ್ಥಿತರಿದ್ದರು