ಡೈಲಿ ವಾರ್ತೆ: 13/ಜುಲೈ /2024
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವಾರ್ಷಿಕ ಮಹಾಸಭೆ, ಪ್ರಗತಿ ಪುಸ್ತಕ ಬಿಡುಗಡೆ
ಬಂಟ್ವಾಳ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನಡೆಯಿತು.
ಘಟಕಾಧ್ಯಕ್ಷ ರಶೀದ್ ವಿಟ್ಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಹಾಸಭೆಯ ವೀಕ್ಷಕರಾಗಿ ಭಾಗವಹಿಸಿದ್ದ ಮೂಡಬಿದಿರೆ ಘಟಕದ ಕೋಶಾಧಿಕಾರಿ ಸಲೀಂ ಹಂಡೇಲು ಮಾತನಾಡಿ, ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಮೀಯ್ಯತುಲ್ ಫಲಾಹ್
ದ.ಕ.ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.
ಬಂಟ್ವಾಳ ಘಟಕದ ಕಾರ್ಯದರ್ಶಿ ಕೆ.ಕೆ.ಶಾಹುಲ್ ಹಮೀದ್ 2023-24 ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ಲೆಕ್ಕ ಪತ್ರ ಮಂಡಿಸಿದರು.
ಇದೇ ವೇಳೆ ಘಟಕದ ಸಚಿತ್ರ ವರದಿ ಮತ್ತು ಲೆಕ್ಕಪತ್ರದ ಕಿರು ಹೊತ್ತಗೆಯನ್ನು ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಬಿಡುಗಡೆ ಮಾಡಿದರು, ಘಟಕದ ಕಾರ್ಯ ಚಟುವಟಿಕೆ ಹಾಗೂ ಮಹಾಸಭೆಯ ಸಿದ್ಧತೆಯಲ್ಲಿ ಶ್ರಮ ವಹಿಸಿದ ಅಬ್ದುಲ್ ರಝಾಕ್ , ಪಿ.ಮೊಹಮ್ಮದ್ ಮತ್ತು ಶೇಖ್ ರಹ್ಮತುಲ್ಲಾ ಅವರನ್ನು ಗೌರವಿಸಲಾಯಿತು, ಪೂರ್ವಾಧ್ಯಕ್ಷರಾದ ಸುಲೈಮಾನ್ ಸೂರಿಕುಮೇರ್ ಮತ್ತು ಉಸ್ಮಾನ್ ಹಾಜಿ ಕರೋಪಾಡಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಸದಸ್ಯರಲ್ಲಿ ಕೋರಲಾಯಿತು.
ಹಾಲೀ ಕಾರ್ಯಕಾರಿ ಸಮಿತಿಯನ್ನು 2024 – 25 ರ ಸಾಲಿಗೆ ಮುಂದುವರಿಸುವ ಬಗ್ಗೆ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಸಭೆಯಲ್ಲಿ ಘೋಷಿಸಿದರು.
ಘಟಕಾದ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿ, ಘಟಕದ ಪೂರ್ವಾಧ್ಯಕ್ಷ ಅಬೂಬಕ್ಕರ್ ವಿಟ್ಲ ಕಿರಾಅತ್ ಪಠಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ವಂದಿಸಿ, ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.