ಡೈಲಿ ವಾರ್ತೆ: 16/ಜುಲೈ /2024

ಮಣಿಪಾಲ: ಫ್ಲ್ಯಾಟ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ರಕ್ಷಣೆ

ಮಣಿಪಾಲ: ಇಲ್ಲಿನ ಫ್ಲ್ಯಾಟ್ ವೊಂದರಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿನಿಯನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಕ್ರತಿ ಗೋಯಲ್(25) ರಕ್ಷಣೆಗೊಳಗಾದ ಯುವತಿ.

ಸೋಮವಾರ ರಾತ್ರಿ ಬಾಗಿಲು ಹಾಕಿ ಮಲಗಿದ್ದ ಇವರಿಗೆ ಬೆಳಗ್ಗೆ ತೆರೆಯಲು ಸಾಧ್ಯವಾಗಲಿಲ್ಲ. ಕೀ ಯನ್ನು ಹೊರಭಾಗದಿಂದಲೇ ತೆಗೆಯಬೇಕಿತ್ತು. ಕೂಡಲೇ ಅವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸಿಬಂದಿಗಳು ಆಗಮಿಸಿ ಹಿಂಭಾಗದ ಕಿಟಕಿ ಒಡೆದು ಆಕೆಯನ್ನು ರಕ್ಷಿಸಿದ್ದಾರೆ.