


ಡೈಲಿ ವಾರ್ತೆ: 16/ಜುಲೈ /2024


ಉಡುಪಿ: ಬಾರ್ ಮಾಲಕರೊಬ್ಬರ ಮನೆಯ
ಬೆಂಕಿ ಅವಘಡ ಪ್ರಕರಣ – ಹೊಟೇಲ್ ಉದ್ಯಮಿಯ ಪತ್ನಿಯೂ ಸಾವು!
ಉಡುಪಿ: ಸೋಮವಾರ ಮುಂಜಾನೆ ಉಡುಪಿಯ ಬಾರ್ ಮಾಲಕರೊಬ್ಬರ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲಕರ ಪತ್ನಿ ಅಶ್ವಿನಿ ಶೆಟ್ಟಿ (47) ಚಿಕಿತ್ಸೆ ಫಲಿಸದೆ ಮಣಿಪಾಲದ ಖಾಸಗಿಆಸ್ಪತ್ರೆಯಲ್ಲಿ ಜು.16ರ ಮಂಗಳವಾರ ನಿಧನ ಹೊಂದಿದರು.
ಇವರ ಪತಿ ರಮಾನಂದ ಶೆಟ್ಟಿ ಜು.15ರ ಸೋಮವಾರ ಸಾವನ್ನಪ್ಪಿದ್ದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅಶ್ವಿನಿ ಶೆಟ್ಟಿ ಅವರು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದರು. ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಬಂಟರ ಸಂಘ, ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿದ್ದು, ತುಳುನಾಡಿನ ಆಚಾರ-ವಿಚಾರಗಳನ್ನು ಬಿಂಬಿಸುವ ವೀಡಿಯೋಗಳನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿ ಖ್ಯಾತಿ ಗಳಿಸಿದ್ದರು.