ಡೈಲಿ ವಾರ್ತೆ: 20/ಜುಲೈ /2024

ನೀರಿನ ಟ್ಯಾಂಕ್‍ ಮೇಲಿನಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ!

ಹರ್ಯಾಣ: ಹಣಕಾಸಿನ ಸಮಸ್ಯೆಯಿಂದ ನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಎತ್ತರದ ನೀರಿನ ಟ್ಯಾಂಕ್‍ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ವೀಡಿಯೊ ವೈರಲ್ ಆಗಿದೆ.

ಘಟನೆ ಹರ್ಯಾಣದ ಖರಾರ್ ನ ಖಾನ್ಪುರ್ ಗ್ರಾಮದಲ್ಲಿ ಗುರುವಾರ ನಡೆದಿದ್ದು, ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸುಮಿತ್ ಚಿಕ್ರಾ(19) ಎಂದು ಗುರುತಿಸಲಾಗಿದೆ. ಈತ ಪಂಜಾಬ್‍ನ ಘರುವಾನ್ ಗ್ರಾಮದ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಆತ ತನ್ನ ಹೆತ್ತವರಿಗೆ ಏಕೈಕ ಮಗ ಎನ್ನಲಾಗಿದೆ. ಆರ್ಥಿಕ ಸಮಸ್ಯೆಗಳಿಂದಾಗಿ ಒತ್ತಡವನ್ನು ಅನುಭವಿಸುತ್ತಿದ್ದ ವಿದ್ಯಾರ್ಥಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ನೀರಿನ ಟ್ಯಾಂಕ್‍ನಿಂದ ಜಿಗಿಯುವ ಮೊದಲು ವಿದ್ಯಾರ್ಥಿ ತನ್ನ ಕೈಯ ಮಣಿಕಟ್ಟನ್ನು ಕತ್ತರಿಸಲು ಪ್ರಯತ್ನಿಸಿದನು ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.