ಡೈಲಿ ವಾರ್ತೆ: 23/ಜುಲೈ /2024

ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆ

ಕೋಟ: ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್ ಹಾಗೂ ಜೀವನ್ ಮಿತ್ರ ಆಂಬುಲೆನ್ಸ್ ಕೋಟ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜು. 23 ರಂದು ಮಂಗಳವಾರ ಬೆಳಿಗ್ಗೆ ಕೋಟ ಶ್ರೀ ಅಮೃತೇಶ್ವರಿ ದೇಗುಲದಲ್ಲಿ ನಡೆಯಿತು.

ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಅವರು
ಜೀವನ್ ಮಿತ್ರ ಸೇವಾ ಟ್ರಸ್ಟ್ ಕೋಟ, ಜೀವನ್ ಮಿತ್ರ ಆಂಬ್ಯುಲೇನ್ಸ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆಗೊಳಿಸಿದರು. ಅವರು ಮಾತನಾಡಿ ಜೀವರಕ್ಷಕ ಕಾರ್ಯದ ಮೂಲಕ ಸಮಾಜಿಕ ಬದ್ದತೆಯನ್ನು ಜೀವನ್ ಮಿತ್ರ ಸಾಕ್ಷಿಕರಿಸಿದೆ. ಸೇವೆಯೇ ಮೂಲ ಮಂತ್ರವಾಗಿರಿಸಿ ಸಮಾಜದ ಋಣ ತಿರಿಸುವ ಕಾರ್ಯ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ದಶ ಸಂವತ್ಸರಗಳನ್ನು ಈ ಸಮಾಜಕ್ಕೆ ನೆರವಿನ ಮೂಲಕ ಊಣಬಡಿಸಿದ ಜೀವನ್ ಮಿತ್ರ ಟ್ರಸ್ಟ್ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಕಾರ್ಯದ ಯಶಸ್ಸಿಗೆ ಶುಭಕೋರಿದರು.

ಜೀವನ್ ಮಿತ್ರ ಸೇವಾ ಟ್ರಸ್ಟ್ ನ ಮುಖ್ಯಸ್ಥ ನಾಗರಾಜ್ ಪುತ್ರನ್ ಮಾತನಾಡಿ ಆಗಸ್ಟ್ 15 ರಂದು ಟ್ರಸ್ಟ್ ದಶಮಾನೋತ್ಸವ ಪ್ರಯುಕ್ತ ಆಶಕ್ತರಿಗೆ ಸಹಾಯ, ಗ್ರಾಮೀಣ ಕ್ರೀಡೆ, ಸನ್ಮಾನ, ಪ್ತಶಸ್ತಿ, ಗೌರವಾರ್ಪಣೆ ಜರಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನಾಗೇಂದ್ರ ಪುತ್ರನ್ ಬಾರಿಕೆರೆ, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ ಸದಸ್ಯ ಎಂ ಜಯರಾಮ ಶೆಟ್ಟಿ, ಭುಜಂಗ ಗುರಿಕಾರ, ಕೋಟತಟ್ಟು ಗ್ರಾ.ಪಂ ಸದಸ್ಯ ರವೀಂದ್ರ ತಿಂಗಳಾಯ, ನ್ಯಾಯವಾದಿ ಶ್ಯಾಮಸುಂದರ ನಾಯರಿ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ ಸಾಲಿಗ್ರಾಮ, ಕೋಟ ಶ್ರೀಕಾಂತ್ ಶೆಣೈ, ಭೋಜ ಪೂಜಾರಿ ಗಿಳಿಯಾರು, ವಸಂತ ಕಾಂಚನ್ ಗುಂಡ್ಮಿ, ಜೀವನ್ ಮಿತ್ರ ಬಳಗದ ವಸಂತ ಸುವರ್ಣ, ಸಂತೋಷ್ ತೆಕ್ಕಟ್ಟೆ, ಶಶಿಧರ ಕುಂದರ್, ಆನಂದ್ ಟೈಲರ್, ಹರ್ತಟ್ಟು ಯುವಕ ಮಂಡಲದ ಪ್ರಮುಖರಾದ ಕೀರ್ತಿಶ ಪೂಜಾರಿ, ಯಕ್ಷ ಸೌರಭ ಕಲಾರಂಗದ ಸ್ಥಾಪಾಕಾಧ್ಯಕ್ಷ ಹರೀಶ್ ಭಂಢಾರಿ, ಧನುಷ್ ವಡ್ಡರ್ಸೆ, ಸ್ವದೇಶ್ ಕಾಸನಗುಂದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕೋಟ ಪಂಚಾಯತ್ ಸದಸ್ಯ ಚಂದ್ರ ಆಚಾರ್ ನಿರೂಪಿಸಿ, ವಂದಿಸಿದರು.