ಡೈಲಿ ವಾರ್ತೆ: 27/ಜುಲೈ /2024

ಗುಂಡ್ಮಿ ಪ್ರೌಢ ಶಾಲೆಯಲ್ಲಿ ಪಂಚವರ್ಣ ಸಂಸ್ಥೆ ವತಿಯಿಂದ ಪರಿಸರ ಜಾಗೃತಿ ಕಾರ್ಯಾಗಾರ ಮಾಲಿಕೆ – ವಿದ್ಯಾರ್ಥಿ ಜೀವನದಲ್ಲೆ ಪರಿಸರ ಬೀಜ ಬಿತ್ತುವ ಕಾರ್ಯ ಶ್ಲಾಘನೀಯ- ವಿನಯಚಂದ್ರ ಸಾಸ್ತಾನ

ಕೋಟ: ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದರೆ ಮುಂದಿನ ಭವಿಷ್ಯಕ್ಕೆ ಸಹಕಾರಿ ಎಂದು ಪರಿಸರವಾದಿ ವಿನಯಚಂದ್ರ ಸಾಸ್ತಾನ ನುಡಿದರು.
ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ ಇವರ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಗುಂಡ್ಮಿ ಇವರ ಸಂಯೋಜನೆಯೊಂದಿಗೆ ಪರಿಸರ ಜಾಗೃತಿ ಕಾರ್ಯಾಗಾರ 11ರ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉದ್ಘಾಟಿಸಿ ಮಾತನಾಡಿ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಅತ್ಯಗತ್ಯ ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆಯ ಪರಿರಸ ಕಾಳಜಿ ಇಡೀ ವ್ಯವಸ್ಥೆಗೆ ಮಾದರಿಯಾಗಿದೆ.
ಪ್ರಸ್ತುತ ಎದುರಿಸುತ್ತಿರುವ ಪ್ರಾಕೃತಿಯ ಅಸಮತೋಲನ,ಪ್ರವಾಹ ಸೃಷ್ಠಿ,ಸಮುದ್ರ ಮಲಿನಗೊಳ್ಳುವುದು,ಅತಿಯಾಗಿ ಪ್ಲಾಸ್ಟಿಕ್ ಬಳಕೆ,ಅದರಲ್ಲಿ ಆಹಾರ ಸೇವನೆಯಿಂದ ಬಾರಿ ಕಂಠಕವಾಗುವ ರೋಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ನಮ್ಮ ಜೀವನ ಪದ್ದತಿ,ಮಣ್ಣು ,ನೀರಿನ ಮಹತ್ವ,ಗಿಡಮರದ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆಇತ್ತರು.
ಶಿಕ್ಷಣ ತಜ್ಞ ಗಣೇಶ್ ಜಿ ಚಲ್ಲಮಕ್ಕಿ ಮಾತನಾಡಿ ಪಂಚವರ್ಣ ಸಂಸ್ಥೆಯ ಕ್ರೀಯಾಶೀಲತೆ ಅವರ ಸಾಮಾಜಿಕ ಬದ್ಧತೆ,ಪರಿಸರ ಕಾಳಜಿ ಇತರ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

ಪ್ರಕೃತಿಯನ್ನು ಪ್ರೀತಿಸುವ ಮನಸ್ಥಿತಿ ಸೃಷ್ಠಿಸಿಕೊಳ್ಳಿ ಆ ಮೂಲಕ ಹೆಚ್ಚು ಹೆಚ್ಚು ಗಿಡಗಳನ್ನು ನಡುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಡ್ಮಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ವಹಿಸಿದ್ದರು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಕಾರ್ಯದರ್ಶಿ ಚಂದ್ರ ಪೂಜಾರಿ,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ರಾಘವೇಂದ್ರ, ಗೆಳೆಯರು ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ರವೀಂದ್ರ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷ ಎ ಕಲಾವತಿ ಅಶೋಕ್ ಸ್ವಾಗತಿಸಿದರು.
ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು. ಇದೇ ವೇಳೆ ವಿದ್ಯಾರ್ಥಿಗೊಂದಿಗೆ ಪರಿಸರಕ್ಕೆ ಸಂಬಂದಿಸಿದ ಸಂವಾದ ಕಾರ್ಯಕ್ರಮ ಹಾಗೂ ಗಿಡ ನಡುವುದರ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು.