ಡೈಲಿ ವಾರ್ತೆ: 29/ಜುಲೈ /2024
ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಪೋಕ್ಸೋ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರ
ಬಂಟ್ವಾಳ : ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಪೋಕ್ಸೋ ಮತ್ತು ಬಾಲ್ಯ ವಿವಾಹ ಕಾಯ್ದೆಯ ಬಗ್ಗೆ ಕಾನೂನು ಮಾಹಿತಿ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.
ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯುವ ವಕೀಲೆ ಮುಫೀಧಾ ರೆಹಮಾನ್ ಕಾಯ್ದೆ ಕುರಿತು ಕಾನೂನಾತ್ಮಕ ಮಾಹಿತಿ ನೀಡಿದರು. ಮತ್ತು ವಿದ್ಯಾರ್ಥಿನಿಯರಿಗೆ
ಮಹಿಳಾ ದೌರ್ಜನ್ಯ, ಲೈಂಗಿಕ ಅಪರಾಧಗಳ ಏರಿಕೆ ಬಗ್ಗೆ ಎಚ್ಚರಿಸುತ್ತಾ, ಈ ಬಗ್ಗೆ ಇರುವ ಕಾಯ್ದೆ ಕಾನೂನುಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಉದಾಹರಣೆಗಳ ಸಹಿತ
ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ
ಫಯಾಜ್ ದೊಡ್ಡಮನೆ ಮಾತನಾಡುತ್ತಾ, ಎಷ್ಟೇ ಕಠಿಣ
ಕಾನೂನು ಕಾಯ್ದೆಗಳು ಇದ್ದರೂ ಮಹಿಳಾ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಅಸಾಧ್ಯವಾಗುತ್ತಿದ್ದು, ಈ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು .
ಉಪನ್ಯಾಸಕ ಅಬ್ದುಲ್ ಮಜೀದ್ ಎಸ್ ಪ್ರಾಸ್ತಾವನೆಗೈದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸುನೀತ ಪಿರೇರ ಉಪಸ್ಥಿತರಿದ್ದರು. ಇಂದೇ ವೇಳೆ ವಿದ್ಯಾರ್ಥಿನಿಯರು ಬಾಲ್ಯ ವಿವಾಹದ ವಿರುದ್ಧ ಪ್ರತಿಜ್ಞೆ ಗೈದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಾರಾ
ಅನ್ಪ ಸ್ವಾಗತಿಸಿ, ಕಾರ್ಯದರ್ಶಿ ಸೌದ ನಾಫಿಯ ವಂದಿಸಿದರು. ವಾಣಿಜ್ಯ ವಿಭಾಗದ ಫಾತಿಮತ್ ಫಾಹಿಮಾ ಕಾರ್ಯಕ್ರಮ ನಿರೂಪಿಸಿದರು.