ಡೈಲಿ ವಾರ್ತೆ: 29/ಜುಲೈ /2024

ಲಕ್ಷ್ಮೇಶ್ವರ: ಹಸಿರು ನೈರ್ಮಲ್ಯ ಶಾಲಾ ಅಭ್ಯುಧಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಳ್ಳಿಯ “ಸತ್ಯ ಸಾಯಿ ಗ್ರಾಮದಲ್ಲಿ, ಶ್ರೀ ಸತ್ಯ ಸಾಯಿಅನ್ನಪೂರ್ಣ ಟ್ರಸ್ಟ್” ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ” ಹಸಿರು ನೈರ್ಮಲ್ಯ ಶಾಲಾ ಅಭ್ಯುಧಯ ಪ್ರಶಸ್ತಿ” ಯನ್ನು, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ , ಸಂಸ್ಥಾಪಕರಾದ ಜಗದ್ಗುರು ” ಶ್ರೀ ಮಧುಸೂಧನ ಸಾಯಿ” ಅವರು ಪ್ರದಾನ ಮಾಡಿದರು.

ಸರಕಾರಿ ಕಿರಿಯರ ಪ್ರಾಥಮಿಕ ಶಾಲೆ ರಂಭಾಪುರಿ ನಗರ ಲಕ್ಷ್ಮೇಶ್ವರ ಶಾಲೆಯ ಗುರುಮಾತೆಯರಾದ, ” ಶ್ರೀಮತಿ ಜಯಶ್ರೀ ಹಬೀಬ್” ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು,
ಪ್ರಶಸ್ತಿಯು ಸನ್ಮಾನ ಪತ್ರ, ಶಾಲೆಯ ಅಭಿವೃದ್ಧಿಗೆ 10,000 ರೂಗಳ ಚೆಕ್, ಮಕ್ಕಳಿಗೆ ಮೌಲ್ಯಯುತವಾದ ಪುಸ್ತಕಗಳು,ಶಿಕ್ಷರಿಗೆ ಡೈರಿ, ಕ್ಯಾಲೆಂಡರ್ ಹಾಗೂ ಕೈಗಾಡಿಯಾರ ಹಾಗೂ ಮಕ್ಕಳಿಗೆ ಚಾಕಲೇಟ್ ಗಳನ್ನು ಪ್ರಶಸ್ತಿಯೊಂದಿಗೆ ನೀಡಿದರು.

ಶ್ರೀಮತಿ ಜಯಶೀ ಹಬೀಬ್ ರವರ ಕಿರು ಪರಿಚಯ:
ಶ್ರೀಮತಿ ಜಯಶ್ರೀ ಪಕ್ಕಿರಸಾ ಹಬೀಬ್, ಗುರುಮಾತೆಯರು 2005 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು,* ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಬಡಾವನೆ ಬೆಳ್ಳಟ್ಟಿ, ಶಾಲೆಯಲ್ಲಿ 5 ವರ್ಷ ಅವಿರತವಾದ ಸೇವೆ ಸಲ್ಲಿಸಿದ್ದು ಅನೇಕ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅಲ್ಲಿಂದ 2010 ರಲ್ಲಿ ವರ್ಗಾವಣೆಗೊಂದು “ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಂಭಾಪುರಿ ನಗರ ಲಕ್ಷ್ಮೇಶ್ವರ. ಶಾಲೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದು. ನಿರಂತರ 19 ವರ್ಷಗಳ ಸೇವೆ ಪೂರ್ಣಗೊಳಿಸಿದ್ದಾರೆ.

ಸ.ಕಿ.ಪ್ರಾ. ಶಾಲೆ ರಂಭಾಪುರಿ ನಗರ ಲಕ್ಷ್ಮೇಶ್ವರ ಶಾಲೆಯು “1 ಎಕರೆ” ವಿಶಾಲವಾದ ವಿಸ್ತೀರ್ಣ ಹೊಂದಿದ ಶಾಲೆಯಾಗಿದ್ದು ಸುಸಜ್ಜಿತವಾದ 3 ಕೊಠಡಿ ಹೊಂದಿದ ಶಾಲಾ ಕಟ್ಟಡ ಹಾಗೂ ಶೌಚಾಲಯವನ್ನು, ಹೊಂದಿದ್ದು 2022 ಅಕ್ಟೋಬರನಲ್ಲಿ ಸ್ವತಂತ್ರ ಅಡುಗೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅತಿ ದೊಡ್ಡ ಶಾಲಾ ಕಂಪೌಂಡನ್ನು ಒಳಗೊಂಡಿದೆ..

ವಾರದಲ್ಲಿ 5 ದಿನ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲು ಹಾಗೂ ” ಸಾಯಿ ಶ್ಯೂರ್ ವತಿಯಿಂದ” ಕೊಡ ಮಾಡಲಾದ. ರಾಗಿ ಮಾಲ್ಟ್ ನ್ನು ವಿದ್ಯಾರ್ಥಿಗಳಿಗೆ. ವಿತರಿಲಾಗುತ್ತಿದೆ. P.M ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಮಕ್ಕಳು ರುಚಿ, ಶುಚಿಯಾದ ಊಟವನ್ನು ಮಕ್ಕಳು ಸವಿಯುತ್ತಾರೆ.

ಮಕ್ಕಳ ಕಲಿಕೆಗೆ ಉತ್ತಮವಾದ ವಾತಾವರಣ ರೂಪಿಸಿ ಅನೇಕ ಚಟುವಟಿಕೆಗಳ ಮೂಲಕ ನಲಿ-ಕಲಿ, ಹಾಗೂ ಕಲಿ-ನಲಿ ಮಾದರಿಯ ಬೋಧನಾ-ಕಲಿಕೆಯಲ್ಲಿ ಮಕ್ಕಳು ಸಕ್ರಿಯವಾಗಿ, ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಪಠ್ಯೇತರ ಚಟುವಟಿಕೆ ಪ್ರತಿಭಾಕಾರಂಜಿ ಸ್ಪರ್ಧೆಗಳು, ವಿವಿಧ ಸಂಘ ಸಂಸ್ಥೆಗಳಿಂದ ನಡೆದ ವೇಷಭೂಷಣ, ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯಲು, ಗುರುಮಾತೆಯರು ಸಹಕರಿಸುತ್ತಾರೆ.

2022-23 ಸಾಲಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು. ಮುರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.ನಮ್ಮ ಶಾಲೆಯು ಒಂದು ಎಕರೆ ಶಾಲಾ ಆವರಣವನ್ನು ಹೊಂದಿರುವುದರಿಂದ ಗಿಡಗಳನ್ನು ನೆಡಬೇಕು.” ಹಚ್ಚ ಹಸುರಿನ ಪರಿಸರ ಸಮುದಾಯದ ಸಹಕಾರ,ಮಕ್ಕಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣ” ನೀಡುವುದು ನಮ್ಮ ಶಾಲೆಯ ಧ್ಯೇಯ ವ್ಯಾಖ್ಯೆ ಯಾಗಿತ್ತು. ಅದರಂತೆ ಅರಣ್ಯ ಇಲಾಖೆಯ ಯವರಿಗೆಗಿಡಗಳನ್ನು ನೆಡಲು ಮನವಿ ಪತ್ರವನ್ನು ಗುರುಮಾತೆಯರು ಸಲ್ಲಿಸಿದರು. ಅದರನ್ವಯ 8 ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು 100 ಸಸ್ಯಗಳನ್ನು ನೆಟ್ಟರು. ಸಸಿಗಳನ್ನು ನೀಡಿಸಿದ ನಂತರ ನೀರಿಗಾಗಿ ಸಾಕಷ್ಟು ಸಮಸ್ಯೆ ಎದುರಾಯಿತು.ಸವಾಲುಗಳನ್ನು ಹಂತ ಹಂತವಾಗಿ ನಿವಾರಿಸಿ ಶಾಲೆಗೆ ಶಾಶ್ವತವಾಗಿ ನೀರು ಸರಬರಾಜು ಮಾಡಿಸಿ 100 ಸಸಿಗಳಿಗೆ ನೀರುಣಿಸಿ ಇಂದು ಅವು ಮರಗಳಾಗಿ ಬೆಳೆದು ಶಾಲೆಯನ್ನು ಸುಂದರಗೊಳಿಸಿವೆ. ಗುರುಮಾತೆಯರ ಈ ಕಾರ್ಯ ಪ್ರಶಂಶನೀಯ,
ಅದರ ಪ್ರತಿಫಲವಾಗಿ ಇಂದು ನಮಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನೀಡಲಾದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ, ಇದು ರಾಜ್ಯಮಟ್ಟದ ಪ್ರಶಸ್ತಿ ನಮ್ಮ ಶಾಲೆಗೆ ದೊರೆತಿದೆ

ಈ ಹಿಂದೆ ಈ ಶಾಲೆಯ ಮಕ್ಕಳ ದಾಖಲಾತಿ ಸಂಖ್ಯೆ ಕೇವಲ “9” ಆಗಿದ್ದು ಶಾಲೆ ಮುಚ್ಚುವ ಸ್ಥಿತಿಗೆ ತಲುಪಿತ್ತು. ಆಗ ಗುರುಮಾತೆಯರು ಪಾಲಕರ ಸಭೆ ಕರೆಯುವುದು, ಮನೆ ಮನೆಗೆ ಭೇಟಿ ನೀಡುವುದು ಹಾಗೂ ಆಕರ್ಷಕ ಚಟುವಟಿಕೆಗಳ ಮೂಲಕ ಮಕ್ಕಳ ದಾಖಲಾತಿ ಹೆಚ್ಚಾಗುವಂತೆ ಮಾಡಿ ಮುಚ್ಚುವ ಶಾಲೆಯನ್ನು ಉಳಿಸಿದರು.
ಇಂದು ನಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ “27” ತಲುಪಿದೆ ಇದು ಗುರುಮಾತೆಯರ ಅವಿಸ್ಮರಣೀಯ ಕಾರ್ಯಗಳಲ್ಲಿ ಪ್ರಮುಖವಾದುದಾಗಿ.
ಶಾಲೆಯ ಅಭಿವೃದ್ಧಿಗೆ ಅನೇಕ ದಾನಿಗಳನ್ನು ಪ್ರೇರೇಪಿಸಿ ಶಾಲೆಗೆ ಕೊಡುಗೆಗಳನ್ನು ಸಂಗ್ರಹಿಸಲಾಗಿದೆ. ಶಾಲೆಯ ಅಭಿವೃದ್ಧಿಗೆ ಮಕ್ಕಳ ಕಲಿಕೆಯ ಪ್ರಗತಿಗೆ ಸದಾ ನಿಸ್ವಾರ್ಥ ಸೇವೆಗೈಯುತ್ತಿದ್ದಾರೆ.

ಈ ಪ್ರಶಸ್ತಿ ಲಭಿಸಲು ಸಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡಿ ನಮ್ಮನ್ನು ಪ್ರೋತ್ಸಾಹಿಸಿದ,
“ನಮ್ಮ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್.ಎಚ್. ನಾಯಕ ಸಾಹೇಬರಿಗೂ” ಶ್ರೀ ಈಶ್ವರ್ ಮೇಡ್ಲೇರಿ ಗುರುಗಳು BRP ಪ್ರೌಢ ಶಾಲೆ. ಶ್ರೀ ಹರೀಶ್ ಗುರುಗಳು ECO ಶಿರಹಟ್ಟಿ. ಶ್ರೀ ಸತೀಶ್ ಬೊಮಲೇ ಗುರುಗಳು CRP ಲಕ್ಷ್ಮೇಶ್ವರ ದಕ್ಷಿಣ. ಇವರಿಗೂ”

“ಲಕ್ಷ್ಮೇಶ್ವರ-ಶಿರಹಟ್ಟಿ ತಾಲೂಕಿನ ಎಲ್ಲ ಶಿಕ್ಷಕ ವೃಂದಕ್ಕೂ “
ಹಾಗೂ ನಮ್ಮ ಶಾಲೆಯ SDMC ಅಧ್ಯಕ್ಷರಿಗೂ ಹಾಗೂ ಸರ್ವಸದಸ್ಯರಿಗೂ ಹಾಗೂ ರಂಭಾಪುರಿ ನಗರದ ಎಲ್ಲ ನಿವಾಸಿಗಳಿಗೂ ಹಾಗೂ ನಮ್ಮ ಶಾಲೆಯ ಮುದ್ದು ವಿದ್ಯಾರ್ಥಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.