ಡೈಲಿ ವಾರ್ತೆ: 30/ಜುಲೈ /2024

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಗೆ ಬಾಗಿಕೊಂಡಿದ್ದ ಬೃಹತ್ ಅಶ್ವಥ ಮರ ತೆರವು

ಬ್ರಹ್ಮಾವರ: ಉಪ್ಪಿನಕೋಟೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಬಾಗಿಕೊಂಡಿದ್ದ ಅಶ್ವಥದ ಮರವನ್ನು ಟೋಲ್ ಸಿಬ್ಬಂದಿಗಳು ತೆರವುಗೊಳಿಸಿದರು.

ಆ ಸಂದರ್ಭದಲ್ಲಿ ತಹಶಿಲ್ದಾರರು, ಗ್ರಾಮ ಲೆಕ್ಕಾಧಿಕಾರಿ,ಮೆಸ್ಕಾಂ ಅಧಿಕಾರಿ,ನೌಕರರು, ಅರಣ್ಯ ಅಧಿಕಾರಿಯವರು,ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು ಮರವನ್ನು ತೆರವು ಮಾಡಲು ಸಹಕರಿಸಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರೂ ಕೂಡ ಮರ ಕಡಿಯುವುದು ಒಬ್ಬರೆ ಆಗಿರುವುದರಿಂದ ಮರ ತೆರವು ಕಾರ್ಯಾಚರಣೆ ತುಸು ತಡವಾಯಿತು.
ಈ ಅಪಾಯಕಾರಿ ಮರವನ್ನು ಅರಣ್ಯ ಇಲಾಖೆಯವರೇ ತೆರವುಗೊಳ್ಳಿಸಬೇಕಿತ್ತು. ಆದರೆ ಜಾಣ ಕುರುಡು ಪ್ರದರ್ಶಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ದುರಂತ ಸಂಭವಿಸುವುದನ್ನೇ ಕಾಯುತ್ತಿದ್ದರೋ ಏನೋ ಎಂಬಂತೆ ನಿಷ್ಕ್ರಿಯರಾಗಿದ್ದರು. ಸಂಭವನೀಯ ದುರಂತವನ್ನು ಅಂದಾಜಿಸಿದ ಟೋಲ್ ಸಿಬ್ಬಂದಿಗಳು ಯಶಸ್ವೀ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಮರ ತೆರವು ಮಾಡಿದರು. ನಿಟ್ಟುಸಿರು ಬಿಟ್ಟ ಸಾರ್ವಜನಿಕರು, ವಾಹನ ಸವಾರರು, ಪರಿಸರದ ನಿವಾಸಿಗಳು ಟೋಲ್ ಸಿಬಂದಿಗಳು ಮತ್ತು ಸಹಕರಿಸಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.