ಡೈಲಿ ವಾರ್ತೆ: 03/ಆಗಸ್ಟ್/2024
ಗ್ರಾಮದಲ್ಲಿ ಪರಿಸರ ಕಾಳಜಿ ಶ್ಲಾಘನೀಯ- ರವೀಂದ್ರ ರಾವ್ ಕೋಡಿ ಹೊಸಬೇಂಗ್ರೆಯಲ್ಲಿ ಹಸಿರು ಜೀವ ಅಭಿಯಾನ
ಕೋಟ: ಗ್ರಾಮ ಗ್ರಾಮಗಳಲ್ಲಿ ಹಸಿರು ಅಭಿಯಾನ ಕಾರ್ಯ ನಿಜಕ್ಕೂ ಶ್ಲಾಘನೀಯ. ಎಂದು ಕೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಹೇಳಿದರು.
ಶನಿವಾರ ಕೋಡಿ ಹೊಸಬೇಂಗ್ರೆ ಅಂಗನವಾಡಿಯಲ್ಲಿ ಪಂಚವರ್ಣ ಸಂಸ್ಥೆ ಕೋಟ ,ಗೀತಾನಂದ ಫೌಂಡೇಶನ್ ಮಣೂರು ಮಾರ್ಗದರ್ಶನದಲ್ಲಿ ಕೋಡಿ ಗ್ರಾಮಪಂಚಾಯತ್ ,ಶಿಶು ಅಭಿವೃದ್ಧಿ ಯೋಜನೆಯ ಬ್ರಹ್ಮಾವರ,ಸಂಜೀವಿನಿ ಒಕ್ಕೂಟ ಕೋಡಿ ಗ್ರಾ.ಪಂ ಇವರುಗಳ ಆಶ್ರಯದಲ್ಲಿ ಮೂರು ತಿಂಗಳ ಕಾಲ ನಡೆಯುವ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಗೌರವ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರ ಇದ್ದರೆ ಮನುಕುಲ ಉಳಿಯಲಿದೆ ಪ್ರಕೃತಿಯ ಮೇಲೆ ನಿರಂತರ ಹಾನಿಗೈಯುತ್ತಿದ್ದೇವೆ ಇದರ ಪರಿಣಾವ ಇಂದು ಹೆಚ್ಚಿನ ಗುಡ್ಡಗಳು ಕುಸಿಯುತ್ತಿದೆ ಇದೇ ರೀತಿ ಮುಂದುವರೆದರೆ ಮನುಕುಲ ಉಳಿಯಲು ಸಾಧ್ಯವಿಲ್ಲ ಈ ದಿಸೆಯಲ್ಲಿ ನಾವೆಲ್ಲರೂ ಹಸಿರು ನೆಟ್ಟು ಬೆಳೆಸೋಣ ನಮ್ಮ ಉಳಿವು ಗಟ್ಟಿಗೊಳಿಸೋಣ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ ವಹಿಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಇದೇ ವೇಳೆ ಮಾರ್ಗದರ್ಶನ ನೀಡಿದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಹಾಗೂ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ಇವರುಗಳನ್ನು ಅಭಿನಂದಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಕೋಡಿ ಗ್ರಾಮಪಂಚಾಯತ್
ಸದಸ್ಯರಾದ ಕೃಷ್ಣ ಪೂಜಾರಿ ಪಿ,ಪ್ರಭಾಕರ ಮೆಂಡನ್ ,ಪೋಷಣ್ ಅಭಿಯಾನ ಜಿಲ್ಲಾ ಸಂಯೋಜಕ ಜಯ ಪೂಜಾರಿ ,ಕೋಡಿ ಬೆಂಗ್ರೆ ಅರೋಗ್ಯ ಇಲಾಖೆ
ಅಮೀತಾ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ
ಅಧ್ಯಕ್ಷೆ ದೀಪಾ ಆರ್ ಖಾರ್ವಿ, ಎಂ.ಬಿ.ಕ ಅನಿತಾ,ಅಂಗನವಾಡಿ ಬಾಲಾವಿಕಾಸ ಸಮಿತಿ
ಅಧ್ಯಕ್ಷೆ ಸುಲೋಚನಾ ,ಸದಸ್ಯ ಸಂತೋಷ ಕುಂದರ್ ,ಸ್ತಿçಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮಾತೆಯರು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಕ್ರಮ ಸಂಯೋಜಕಿ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ನಿರೂಪಿಸಿದರು. ಸಹಾಯಕಿ ರೋಹಿಣಿ ಪ್ರಾರ್ಥಿಸಿದರು.ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಸ್ತಾವನೆ ಸಲ್ಲಿಸಿದರು.
ಸಿಎಚ್‌ಓ ಪರಸಪ್ಪ ವಂದಿಸಿದರು.