ಡೈಲಿ ವಾರ್ತೆ: 03/ಆಗಸ್ಟ್/2024

ಗುಣಮಟ್ಟದ ಕಲಿಕೆಗೆ ದಾನಿಗಳ ಸಹಕಾರ ಅಗತ್ಯ


“ಇಂದಿನ ದಿನಗಳಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಸಮುದಾಯದ ಸಹಕಾರ ಅಗತ್ಯ, ಅದರಲ್ಲೂ ಕಲಿಕಾ ಸಾಮಗ್ರಿಗಳ ಪೊರೈಕೆಯಲ್ಲಿ ಹಲವಾರು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸಹಕಾರ ಸಹಾಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಟೆಕ್ಸಾಸ್ ಬೆಂಗಳೂರ ಕಂಪನಿಯ ಇಂತಹ ಕಾರ್ಯವನ್ನು ಮಾಡುತ್ತಿದೆ. ಇಂತಹ ಕಾರ್ಯಗಳು ಆದರಣೀಯ ” ಎಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್ ಎಚ್ ನಾಯಕರವರು ಪ್ರಸ್ತಾಪಿಸಿದರು.

ಸ.ಹಿ.ಪ್ರಾ.ಶಾಲೆ.ನಂ.2 ಲಕ್ಷ್ಮೇಶ್ವರ ಶಾಲೆಯ 260 ಮಕ್ಕಳಿಗೆ ಟೆಕ್ಸಾಸ್ ಇನ್ಟ್ರೂಮೆಂಟ್ಸ ಬೆಂಗಳೂರು ಇವರಿಂದ ಕೊಡಮಾಡಿದ ಒಟ್ಟು 1,51,000 ರೂಪಾಯಿಗಳ ಮೌಲ್ಯದ ಬ್ಯಾಗ್ ಹಾಗೂ ಕಲಿಕಾ ಕಿಟ್ ವಿತರಣಾ ಸಮಾರಂಭದಲ್ಲಿ ಟೆಕ್ಸಾಸ್ಇನ್ಸ್ಟ್ರೂಮೆಂಟ್ಸ್ ಸಂಸ್ಥೆಯ ಶಿವಂ ಸರ್, ಶುಭಂ ಸರ್ ಶ್ರೀ.ಸಂಜೀವ ಪಲ್ಲೇದ , ಡಯಟ್ ಗದಗನ ಉಪನ್ಯಾಸಕರಾದ ಶ್ರೀ.ಎಚ್.ಬಿ.ರೆಡ್ಡೇರ ಇ.ಸಿ.ಓ.ಶ್ರೀ.ಉಮೇಶ ಹುಚ್ಚಯ್ಯನಮಠ ಬಿ.ಆರ್.ಪಿ.ಶ್ರೀ.ಈಶ್ವರ ಮೆಡ್ಲೇರಿ,ಶ್ರೀ.ಬಿ.ಎಂ.ಯರಗುಪ್ಪಿಎಂ ಎಸ್ ಹಿರೇಮಠ,ಸಿ.ಆರ್.ಪಿ.ಗಳಾದ ಶ್ರೀ.ಉಮೇಶ ನೇಕಾರ,ಶ್ರೀ.ಸತೀಶ ಬೋಮಲೆ,ಶ್ರೀ.ಸಿ.ವಿ.ವಡಕಣ್ಣವರ,ಮುಖ್ಯ ಶಿಕ್ಷಕರಾದ ಶ್ರೀ.ಬಿ.ಎಂ.ಕುಂಬಾರ,ಶ್ರೀ ಡಿ.ಎನ್.ದೊಡ್ಡಮನಿ,ಶ್ರೀಮತಿ.ಎಸ್.ಎಸ್.ಜೀರಂಕಳಿ ಹಾಗೂ ಶಾಲೆಯ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.